×
Ad

ಶಬರಿಮಲೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆರೆಸ್ಸೆಸ್ ನಾಯಕನಿಂದ ದೇವಳದ ಪದ್ಧತಿ ಉಲ್ಲಂಘನೆ

Update: 2018-11-06 16:27 IST

ಶಬರಿಮಲೆ, ನ.6:  ಶಬರಿಮಲೆ ಅಯ್ಯಪ್ಪ ದೇವಸ್ಥಾನವನ್ನು ಮಂಗಳವಾರ ಪ್ರವೇಶಿಸಲೆತ್ನಿಸಿದ ಮಹಿಳೆಯೊಬ್ಬರಿಗೆ 50 ವರ್ಷ ತುಂಬಿಲ್ಲ ಎಂದು ಆಕೆಯ ಸುತ್ತ ‘ಅಯ್ಯಪ್ಪ ಶರಣಂ’ ಎಂದು ಸುಮಾರು 200 ಮಂದಿ ಭಕ್ತರು ಪ್ರತಿಭಟಿಸುತ್ತಿದ್ದ ಸಂದರ್ಭ ಆರೆಸ್ಸೆಸ್ ನಾಯಕರೊಬ್ಬರು ಅಯ್ಯಪ್ಪ ಸನ್ನಿಧಾನಂನ ಪ್ರಮುಖ ಪದ್ಧತಿಯೊಂದನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಬರಿಮಲೆಯಲ್ಲಿ ಪ್ರತಿಭಟಿಸುತ್ತಿರುವವರಲ್ಲೊಬ್ಬರಾಗಿರುವ ಆರೆಸ್ಸೆಸ್ಸಿನ ವಲ್ಸನ್ ತಿಲ್ಲಂಕೇರಿ ಎಂಬವರು ದೇವಳದ  18 ಮೆಟ್ಟಿಲುಗಳಲ್ಲಿ ಪದ್ಧತಿಯಂತೆ ಇರುಮುಡಿ ಕಟ್ಟು ತಲೆಯ ಮೇಲಿಲ್ಲದೇ ನಿಂತಿದ್ದರು. ಅಷ್ಟೇ ಅಲ್ಲದೆ  ಮೆಟ್ಟಿಲುಗಳಿಂದ ಪದ್ಧತಿಗೆ ವಿರುದ್ಧವಾಗಿ ಇಳಿದುಕೊಂಡು ಬಂದಿದ್ದರು. ಈ ಮೆಟ್ಟಿಲುಗಳನ್ನು ಇರುಮುಡಿ ಕಟ್ಟು ತಲೆಯಲ್ಲಿಟ್ಟುಕೊಂಡು ಮಾತ್ರ ಹತ್ತಬಹುದಾಗಿದೆ.

ದೇವಳ ಪ್ರವೇಶಿಸಬಯಸಿದ್ದ ಮಹಿಳೆ ಲಲಿತಾ ಅವರಿಗೆ 52 ವರ್ಷ ವಯಸ್ಸು ಎಂದು ದೃಢೀಕರಿಸಿದ ನಂತರ ಪೊಲೀಸರು ವಲ್ಸನ್ ಜತೆ ಮಾತನಾಡಿಯೇ ಆಕೆಯನ್ನು ದೇವಳದೊಳಕ್ಕೆ ಬಿಟ್ಟಿದ್ದರು. ಅಯ್ಯಪ್ಪ ದರ್ಶನದ ಬಳಿಕ ಅಸೌಖ್ಯಗೊಂಡ ಲಲಿತಾ ಅವರಿಗೆ ಚಿಕಿತ್ಸೆಯೊದಗಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News