ಲಕ್ನೋ ಕ್ರೀಡಾಂಗಣದ ಹೆಸರು ಬದಲಾಯಿಸಿದ ಸಿಎಂ ಆದಿತ್ಯನಾಥ್

Update: 2018-11-06 14:42 GMT

ಲಕ್ನೋ, ನ.6:  ಉತ್ತರ ಪ್ರದೇಶದಲ್ಲಿ ಸ್ಥಳಗಳ ಹೆಸರನ್ನು ಬದಲಾಯಿಸುವ  ಯೋಜನೆ ಹಾಕಿಕೊಂಡಿರುವ  ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ್ ಇದೀಗ  ಕ್ರಿಕೆಟ್ ಕ್ರೀಡಾಂಗಣದ   ಹೆಸರನ್ನು ಬದಲಾಯಿಸುವ ಕಡೆಗೂ ಗಮನ ಹರಿಸಿದ್ದಾರೆ.

ಲಕ್ನೋದಲ್ಲಿ ನಿರ್ಮಾಣಗೊಂಡಿರುವ 50 ಆಸನಗಳ ಸಾಮರ್ಥ್ಯದ ಏಕಾನ ಅಂತರ್ ರಾಷ್ಟ್ರೀಯ ಕ್ರೀಡಾಂಗಣದ ಹೆಸರನ್ನು   ‘ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂ  ’ ಎಂದು  ಬದಲಾಗಿದೆ.

ಭಾರತ ಮತ್ತು ಪ್ರವಾಸಿ  ವೆಸ್ಟ್ ಇಂಡೀಸ್  ಕ್ರಿಕೆಟ್ ತಂಡಗಳ ದ್ವಿತೀಯ ಟ್ವೆಂಟಿ -20 ಪಂದ್ಯ  ಆರಂಭಕ್ಕೂ ಮುನ್ನ ಕ್ರೀಡಾಂಗಣವನ್ನು ಉದ್ಘಾಟಿಸಿದ ಮುಖ್ಯ ಮಂತ್ರಿ   ಆದಿತ್ಯನಾಥ್  ಕ್ರೀಡಾಂಗಣದ ಹೆಸರು ಬದಲಾಗಿರುವುದನ್ನು ಘೋಷಿಸಿದರು.

ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದ  ಆದಿತ್ಯನಾಥ್, " ಸರಕಾರ   ಕ್ರಿಕೆಟ್ ಜೊತೆಗೆ ದೇಶದ  ಎಲ್ಲ ಕ್ರೀಡೆಗಳಿಗೂ    ಉತ್ತೇಜನ ನೀಡಲು ಯೋಚಿಸುತ್ತಿದೆ.   ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕ್ರೀಡೆಗಳ ಅಭಿವೃದ್ಧಿಯ ಕನಸು ಕಂಡಿದ್ದರು. ಅವರ ಕನಸಿನಂತೆ ದೇಶದ  ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ದೇಶದ ಎಲ್ಲಡೆ ಗ್ರಾಮಾಂತರ ಪ್ರದೇಶಗಳಲ್ಲಿ ಸುಸಜ್ಜಿತ ಕ್ರೀಡಾಂಗಳನ್ನು ನಿರ್ಮಿಸಲಾಗುವುದು. ಗಾಝಿಯಾಬಾದ್ ನಲ್ಲಿ ಶೀಘ್ರದಲ್ಲೇ ದೊಡ್ಡ ಕ್ರೀಡಾಂಗಣ ನಿರ್ಮಿಸಲಾಗುವುದು  ಎಂದು ಹೇಳಿದರು.  

ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ವಾಜಪೇಯಿ 1999ರಿಂದ 2009ರ ತನಕ ಲಕ್ನೋದ ಸಂಸತ್ ಸದಸ್ಯರಾಗಿದ್ದರು. ಈ ಕಾರಣದಿಂದಾಗಿ ಲಕ್ನೋದ ಕ್ರೀಡಾಂಗಣಕ್ಕೆ ಅವರ ಹೆಸರಿನ್ನಡಲಾಗಿದೆ ಎಂದು ಹೇಳಿದರು.

ಮಾಜಿ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಲಕ್ನೋ ದ  ಏಕಾನ ಅಂತರ್ ರಾಷ್ಟೀಯ ಕ್ರಿಕೆಟ್ ಸ್ಟೇಡಿಯಂನ್ನು ನಿರ್ಮಿಸಲಾಗಿತ್ತು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News