ಆರ್ ಬಿಐಗೆ ಹೆಚ್ಚಿನ ಸ್ವಾಯತ್ತತೆ ಅಗತ್ಯ: ರಘುರಾಮ್ ರಾಜನ್

Update: 2018-11-06 14:46 GMT

ಹೊಸದಿಲ್ಲಿ, ನ.6: ಸರಕಾರದಿಂದ ಹೆಚ್ಚಿನ ಸ್ವಾಯತ್ತತೆ ಬಯಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಲುವನ್ನು ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸಮರ್ಥಿಸಿಕೊಂಡಿದ್ದಾರೆ. ಸ್ವತಂತ್ರ ಹಾಗು ಸದೃಢ ಆರ್ ಬಿಐಯಿಂದ ದೇಶಕ್ಕೆ ನೆರವಾಗಲಿದೆ ಎಂದವರು ಹೇಳಿದರು.

ಪರಸ್ಪರರ ಉದ್ದೇಶ ಮತ್ತು ಸ್ವಾಯತ್ತತೆಯನ್ನು ಗೌರವಿಸಿದರೆ ಕೇಂದ್ರ ಸರಕಾರ ಮತ್ತು ಸರಕಾರದ ನಡುವಿನ ಸಂಘರ್ಷವನ್ನು ಪರಿಹರಿಸಬಹುದು ಎಂದು ಅವರು ಸಿಎನ್ ಬಿಸಿ ಜೊತೆಗಿನ ಸಂದರ್ಶನದಲ್ಲಿ ಹೇಳಿದರು.

“ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಂಸ್ಥಿಕ ಸ್ವಾಯತ್ತತೆಯನ್ನು ನಾವು ದೇಶದ ಹಿತಾಸಕ್ತಿಗಾಗಿ ಗೌರವಿಸುತ್ತೇವೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News