ವಿರಾಟ್ ದಾಖಲೆ ಮುರಿದ ರೋಹಿತ್
Update: 2018-11-06 20:36 IST
ಲಕ್ನೋ, ನ.6: ಟೀಮ್ ಇಂಡಿಯಾದ ಹಂಗಾಮಿ ನಾಯಕ ರೋಹಿತ್ ಶರ್ಮಾ ಅವರು ನಾಯಕ ವಿರಾಟ್ ಕೊಹ್ಲಿ ಟ್ವೆಂಟ್ -20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳ ದಾಖಲೆಯನ್ನು ಮುರಿದರು.
ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟ್ವೆಂಟಿ -20 ಕ್ರಿಕೆಟ್ ಪಂದ್ಯದಲ್ಲಿ ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಅವರು 11 ರನ್ ಗಳಿಸುತ್ತಿದ್ದಂತೆ ಕೊಹ್ಲಿ ದಾಖಲೆ ಪತನಗೊಂಡಿತು. ವಿರಾಟ್ ಕೊಹ್ಲಿ 62 ಟ್ವೆಂಟಿ -20 ಪಂದ್ಯಗಳ 58 ಇನಿಂಗ್ಸ್ ಗಳಲ್ಲಿ 2,102 ರನ್ ದಾಖಲಿಸಿದ್ದರು. ಈ ಮೊದಲು ರೋಹಿತ್ ಶರ್ಮಾ 85 ಪಂದ್ಯಗಳ 78 ಇನಿಂಗ್ಸ್ ಗಳಲ್ಲಿ 2,092 ರನ್ ಗಳಿಸಿದ್ದರು..
ಮಂಗಳವಾರ 5ನೇ ಓವರ್ ನಲ್ಲಿ ವಿಂಡೀಸ್ ನ ಬೌಲರ್ ಒಶಾನೆ ಥಾಮಸ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಎತ್ತಿದ ರೋಹಿತ್ ಶರ್ಮಾ ಅವರು ತನ್ನ ಹೆಸರಲ್ಲಿ ಹೊಸ ದಾಖಲೆ ಬರೆದರು