×
Ad

ಈ ಗ್ರಾಮದಲ್ಲಿರುವುದು ಕೇವಲ 4 ಮತದಾರರು, ಮೂವರು ಒಂದೇ ಕುಟುಂಬದವರು!

Update: 2018-11-07 15:05 IST

ಛತ್ತೀಸ್ ಗಢ, ನ.7: ಛತ್ತೀಸ್ ಗಢದಲ್ಲಿ ವಿಧಾನಸಭಾ ಚುನಾವಣೆಯು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಇಲ್ಲಿನ ಭರತ್ಪುರ-ಸೋನ್ಹತ್ ಕ್ಷೇತ್ರದ ಗ್ರಾಮವೊಂದರಲ್ಲಿ ಕೇವಲ ನಾಲ್ವರು ಮತದಾರರಿದ್ದಾರೆ. ಇದರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.

ಚುನಾವಣೆಗೆ ಮುನ್ನ ಗ್ರಾಮಕ್ಕೆ ತೆರಳಿ ಮತದಾರರಿಗೆ ಟೆಂಟ್ ನಿರ್ಮಿಸಲಾಗುವುದು ಎಂದು ಚುನಾವಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಗ್ರಾಮವನ್ನು ತಲುಪಲು ಕಲ್ಲುಗಳಿಂದ ತುಂಬಿರುವ ಬೆಟ್ಟ ಹತ್ತಿ 5-6 ಕಿ.ಮೀ. ನಡೆದು ನಂತರ ನದಿಯೊಂದನ್ನು ದಾಟಬೇಕಿದೆ. ಇಲ್ಲಿಗೆ ಯಾವುದೇ ಸೂಕ್ತ ರಸ್ತೆ ಇಲ್ಲದೆ ಇರುವುದರಿಂದ ಚುನಾವಣಾ ಸಿಬ್ಬಂದಿ ಮತದಾನದ ಮೊದಲ ದಿನವೇ ಅಲ್ಲಿಗೆ ತಲುಪಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News