ಒದ್ದೆ ಸಾಕ್ಸ್‌ಗಳನ್ನು ಧರಿಸಿ ಮಲಗುವುದರ ಆರೋಗ್ಯಲಾಭಗಳು ಗೊತ್ತೇ?

Update: 2018-11-07 12:43 GMT

ಔಷಧಿಗಳು ನಮ್ಮ ಜೀವಗಳನ್ನು ಉಳಿಸುತ್ತವೆ, ಆದರೆ ಅವು ಅಡ್ಡ ಪರಿಣಾಮಗಳನ್ನೂ ಹೊಂದಿವೆ ಎನ್ನುವುದೂ ನಿಜ. ಔಷಧಿಗಳಿಗಿಂತಲೂ ಹೆಚ್ಚು ಸುರಕ್ಷಿತವಾದ ಹಲವಾರು ನೈಸರ್ಗಿಕ ಪರಿಹಾರಗಳಿದ್ದು,ಇವು ಅಗ್ಗವೂ ಆಗಿವೆ.

ಇಲ್ಲೊಂದು ಇಂತಹ ಸರಳ ನೈಸರ್ಗಿಕ ವಿಧಾನವಿದೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಐದು ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರವಾಗಿದೆ. ಇಂತಹ ಸರಳ ಚಿಕಿತ್ಸಾ ಕ್ರಮವೂ ಇದೆಯೇ ಎಂದು ನಿಮಗೆ ಅಚ್ಚರಿ ಉಂಟಾಗಬಹುದಾದರೂ ಇದರ ಪವಾಡವು ಕೇವಲ 10 ನಿಮಿಷಗಳಲ್ಲಿ ನಿಮ್ಮಲ್ಲಿ ಚೇತರಿಕೆಯನ್ನುಂಟು ಮಾಡುತ್ತದೆ.

ಈ ನೈಸರ್ಗಿಕ ಚಿಕಿತ್ಸಾ ಕ್ರಮಕ್ಕೆ ನಿಮಗೆ ಮುಖ್ಯವಾಗಿ ಬೇಕಾಗಿರುವುದು ಒಂದು ಜೊತೆ ಸಾಕ್ಸ್ ಅಥವಾ ಕಾಲುಚೀಲಗಳು. ಹಲವಾರು ವರ್ಷಗಳಿಂದಲೂ ಈ ಚಿಕಿತ್ಸಾ ವಿಧಾನ ಜಾರಿಯಲ್ಲಿದೆ ಮತ್ತು ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.

ಜ್ವರ

ನಿಮಗೆ ಜ್ವರ ಕಾಣಿಸಿಕೊಂಡಾಗ ಮಾತ್ರೆಗಳನ್ನೂ ನುಂಗಿದರೂ ಯಾವುದೇ ಸುಧಾರಣೆ ಕಂಡು ಬರದಿದ್ದರೆ ಈ ಉಪಾಯವನ್ನು ಮಾಡಿ. ಒಂದು ಪಾತ್ರೆಯಲ್ಲಿ ಎರಡು ಗ್ಲಾಸ್ ನೀರು ಸುರಿದು ಅದಕ್ಕೆ ಒಂದು ಟೇಬಲ್‌ಸ್ಪೂನ್ ವಿನೆಗರ್ ಬೆರೆಸಿ. ಒಂದು ಜೊತೆ ಕಾಲುಚೀಲಗಳನ್ನು ಈ ನೀರಿನಲ್ಲಿ ನೆನೆಸಿರಿ. ಹೆಚ್ಚುವರಿ ನೀರನ್ನು ಹಿಂಡಿ ತೆಗೆದು ರಾತ್ರಿ ಮಲಗುವಾಗ ಅವುಗಳನ್ನು ಧರಿಸಿಕೊಳ್ಳಿ. 40 ನಿಮಿಷಗಳಲ್ಲಿ ಶರೀರದ ತಾಪಮಾನ ಕಡಿಮೆಯಾಗುತ್ತದೆ. ವಿನೆಗರ್ ರಕ್ತ ಪ್ರವಾಹವನ್ನು ಹೆಚ್ಚಿಸಿ ಜ್ವರವನ್ನು ತಗ್ಗಿಸುತ್ತದೆ. ಅದು ಶರೀರದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಮೂಲಕ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುವುದನ್ನು ತಡೆಯುತ್ತದೆ.

ಕೆಮ್ಮು

ಒದ್ದೆ ಕಾಲುಚೀಲಗಳನ್ನು ಧರಿಸಿ ಮಲಗುವುದು ತೀವ್ರ ಕೆಮ್ಮಿನಿಂದ ಪಾರಾಗಲು ಅತ್ಯುತ್ತಮ ಮಾರ್ಗವಾಗಿದೆ. ಒಂದು ಪಾತ್ರೆಯಲ್ಲಿ ಎರಡು ಕಪ್ ಹಾಲು ಹಾಕಿ,ಅದಕ್ಕೆ ಒಂದು ಟೇಬಲ್‌ಸ್ಪೂನ್ ಜೇನು ಮತ್ತು ಎರಡು ದೊಡ್ಡ ಗಾತ್ರದ ಈರುಳ್ಳಿಯ ಬಿಲ್ಲೆಗಳನ್ನು ಸೇರಿಸಿ. 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಳಿಕ ಕಾಲಚೀಲಗಳನ್ನು ಅದರಲ್ಲಿ ಅದ್ದಿ,ಹಿಂಡಿಕೊಂಡು ಅವುಗಳನ್ನು ಧರಿಸಿಕೊಂಡು ನಿದ್ರಿಸಿ. ಈರುಳ್ಳಿ ಹಾಲು ತನ್ನ ಬ್ಯಾಕ್ಟೀರಿಯಾ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳಿಂದಾಗಿ ಮತ್ತು ಕಫವನ್ನು ಕರಗಿಸುವ ತನ್ನ ಸಾಮರ್ಥ್ಯದಿಂದ ಕೆಮ್ಮನ್ನು ಉಪಶಮನಗೊಳಿಸುತ್ತದೆ.

ಮಲಬದ್ಧತೆ

 ಸೌಮ್ಯ ವಿರೇಚಕಗಳಾಗಿ ಕಾರ್ಯ ನಿರ್ವಹಿಸುವ ಒದ್ದೆ ಕಾಲುಚೀಲಗಳು ಹೊಟ್ಟೆಯನ್ನು ಸ್ವಚ್ಛಗೊಳಿಸುವ ಮೂಲಕ ತೊಂದರೆಗಳನ್ನು ನಿವಾರಿಸುತ್ತವೆ. ಸಣ್ಣ ತುಂಡು ಚೀಸ್,ಅರ್ಧ ಸೇಬು,ಒಂದು ಟೇಬಲ್‌ಸ್ಪೂನ್ ಜೇನು ಮತ್ತು ಒಂದು ಟೇಬಲ್‌ಸ್ಪೂನ್ ಅಗಸೆ ಬೀಜಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಒಂದು ಕಪ್ ನೀರು ಸೇರಿಸಿ. ಈ ದ್ರಾವಣದಲ್ಲಿ ಒಂದು ಜೊತೆ ಉಣ್ಣೆಯ ಕಾಲುಚೀಲಗಳನ್ನು ನೆನೆಸಿ ಹಿಂಡಿದ ಬಳಿಕ ಅವುಗಳನ್ನು ಧರಿಸಿಕೊಂಡು ಮಲಗಿದರೆ ಮಲಬದ್ಧತೆಯು ನಿವಾರಣೆಯಾಗುತ್ತದೆ.

ಪಚನ ಕ್ರಿಯೆ

ಸೀಮೆ ಸೋಂಪು,ಬಡೇಸೊಪ್ಪು ಮತ್ತು ನೀರನ್ನು ಸೇರಿಸಿ 15 ನಿಮಿಷಗಳ ಕಾಲ ಕುದಿಸಿದ ಬಳಿಕ ಕಾಲುಚೀಲಗಳನ್ನು ಅದರಲ್ಲಿ ನೆನೆಸಿ, ಹೆಚ್ಚುವರಿ ನೀರನ್ನು ಹಿಂಡಿ ತೆಗೆದು ಅವುಗಳನ್ನು ಧರಿಸಿಕೊಂಡು ಮಲಗಿದರೆ ಅರ್ಧ ಗಂಟೆಯಲ್ಲಿ ಜೀರ್ಣ ಸಂಬಂಧಿ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಸೋಂಪು ಮತ್ತು ಬಡೇಸೊಪ್ಪಿನ ಕಾಳುಗಳು ಪರೋಕ್ಷವಾಗಿ ಹೊಟ್ಟೆಯಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ಸೋಂಕಿನಿಂದ ಮುಕ್ತಗೊಳ್ಳಲು ನೆರವಾಗುತ್ತವೆ.

ಬಳಲಿಕೆ

ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಒಂದು ಟೇಬಲ್‌ಸ್ಪೂನ್ ನೀಲಗಿರಿ ಎಣ್ಣೆಯನ್ನು ಸೇರಿಸಿ. ಕಾಲುಗಳನ್ನು ಮತ್ತು ಕಾಲುಚೀಲಗಳನ್ನು ಈ ನೀರಿನಲ್ಲಿ ಅದ್ದಿದ ಬಳಿಕ ತಕ್ಷಣ ಕಾಲುಚೀಲಗಳನ್ನು ಧರಿಸಿ ಮಲಗಿ. ನೀಲಗಿರಿ ಎಣ್ಣೆಯು ನಿಮ್ಮ ಬಳಲಿಕೆಯನ್ನು ನಿವಾರಿಸಿ ನಿಮ್ಮನ್ನು ತಾಜಾ ಆಗಿಸುವ ಗುಣವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News