ಒಂದೇ ಓವರ್ ನಲ್ಲಿ 43 ರನ್ ಸಿಡಿಸಿ ದಾಖಲೆ!

Update: 2018-11-07 15:28 GMT

ಹ್ಯಾಮಿಲ್ಟನ್, ನ.7: ನ್ಯೂಝಿಲೆಂಡ್‌ನಲ್ಲಿ ನಡೆದ ದೇಶೀಯ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್‌ನ ಇಬ್ಬರು ದಾಂಡಿಗರು ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇಲ್ಲಿನ ಹ್ಯಾಮಿಲ್ಟನ್‌ನಲ್ಲಿರುವ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಾರ್ಥರ್ನ್ ಡಿಸ್ಟ್ರಿಕ್ಟ್ಟ್ ಮತ್ತು ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡಗಳ ಮಧ್ಯೆ ಬುಧವಾರ ನಡೆದ ಫೋರ್ಡ್ ಟ್ರೋಫಿ ಏಕದಿನ ಪಂದ್ಯದಲ್ಲಿ ಸೆಂಟ್ರಲ್ ಡಿಸ್ಟ್ರಕ್ಟ್‌ನ ಮಧ್ಯಮ ವೇಗಿ ವಿಲ್ಲೆಮ್ ಲ್ಯೂಡಿಕ್ ಎಸೆದ ಒಂದು ಓವರ್‌ನಲ್ಲಿ ನಾಥರ್ರ್ರ್ನ್ ಡಿಸ್ಟ್ರಿಕ್ಸ್‌ನ ಜೋ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಈ ಸಾಧನೆ ಮಾಡಿದ್ದಾರೆ. ತನ್ನ ಒಂಬತ್ತು ಓವರ್‌ಗಳಲ್ಲಿ 42 ರನ್‌ಗಳನ್ನು ನೀಡಿದ್ದ ಲ್ಯೂಡಿಕ್ ಒಂದು ಓವರ್‌ನಲ್ಲಿ ತೀವ್ರ ದಂಡನೆಗೀಡಾಗುವ ಮೂಲಕ ಹತ್ತು ಒವರ್ ಸಂಪೂರ್ಣಗೊಳಿಸುವ ವೇಳೆಗೆ ಎದುರಾಳಿ ತಂಡಕ್ಕೆ 85 ರನ್ ಬಿಟ್ಟುಕೊಟ್ಟಿದ್ದರು. ಲುಡಿಕ್ ಎಸೆದ ದುಬಾರಿ ಓವರ್‌ನಲ್ಲಿ ಎರಡು ನೋಬಾಲ್ ಸೇರಿವೆ. ಈ ಎರಡು ಎಸೆತಗಳಲ್ಲೂ ಎರಡು ಸಿಕ್ಸರ್ ಜಮೆ ಆಗಿತ್ತು. ಈ ಓವರ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಆರು ಸಿಕ್ಸರ್, ಒಂದು ಬೌಂಡರಿ ಮತ್ತೊಂದು ಸಿಂಗಲ್ ರನ್ ಕಸಿದುಕೊಂಡರು.

 ಈ ಪಂದ್ಯದಲ್ಲಿ ಕಾರ್ಟರ್ 102 ರನ್ ಬಾರಿಸಿದರೆ ಹ್ಯಾಂಪ್ಟನ್ 95 ರನ್ ಗಳಿಸಿ ಶತಕ ವಂಚಿತ ಗೊಂಡರು. ನಿಗದಿತ 50 ಓವರ್‌ಗಳಲ್ಲಿ 313 ರನ್ ಸೇರಿಸಿದ ನಾಥರ್ರ್ನ್ ಡಿಸ್ಟ್ರಿಕ್ಟ್‌ತಂಡ ಈ ಪಂದ್ಯವನ್ನು 25 ರನ್‌ಗಳಿಂದ ಗೆದ್ದುಕೊಂಡಿತು.

 43 ರನ್ ಹೇಗೆ ಬಂತು ?

 ವಿಲ್ಲೆಮ್ ಲ್ಯೂಡಿಕ್ ಅವರ ಓವರ್‌ನಲ್ಲಿ ಜೋ ಕಾರ್ಟರ್ 23 ರನ್(4+6+6++6+1), ಬ್ರೆಟ್ ಹ್ಯಾಂಪ್ಟನ್ 18ರನ್ (6+6+6) ಹಾಗೂ 2 ರನ್ ನೋಬಾಲ್ ಮೂಲಕ ಬಂತು. ವಿವರ ಇಂತಿವೆ.

1ನೇ ಎಸೆತ :4 ರನ್

2ನೇ ಎಸೆತ : 6+1ರನ್(ನೋಬಾಲ್)

2ನೇ ಎಸೆತ : 6+1ರನ್(ನೋಬಾಲ್)

2ನೇ ಎಸೆತ: 6ರನ್

3ನೇ ಎಸೆತ :1 ರನ್

4ನೇ ಎಸತ: 6ರನ್

5ನೇ ಎಸೆತ :6ರನ್

6ನೇ ಎಸೆತ :6ರನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News