×
Ad

ಪೊಲೀಸರಿಂದ ಗರ್ಭಿಣಿಗೆ ಥಳಿತ: ಆರೋಪ

Update: 2018-11-07 22:02 IST

ಹೊಸದಿಲ್ಲಿ, ನ.7: ತನ್ನನ್ನು ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ 7 ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು ದೂರು ದಾಖಲಿಸಿರುವುದಾಗಿ ವರದಿಯಾಗಿದೆ.

   ಕನ್ನಾಟ್‌ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ತನ್ನ ಪತಿಯನ್ನು ಪೊಲೀಸ್ ಕಾನ್‌ಸ್ಟೇಬಲ್ ಥಳಿಸಿದ್ದು ಇದನ್ನು ಕಂಡ ಅತ್ತೆ(ಪತಿಯ ತಾಯಿ) ರಕ್ಷಣೆಗಾಗಿ ಧಾವಿಸಿದ್ದಾರೆ. ಆಗ ಪೊಲೀಸ್ ಕಾನ್‌ಸ್ಟೇಬಲ್ ಅವರನ್ನೂ ಥಳಿಸಿದ್ದಾರೆ. ಹಲ್ಲೆ ತಡೆಯಲು ಯತ್ನಿಸಿದ ತನ್ನ ಮೇಲೂ ಲಾಠಿಯಿಂದ ಥಳಿಸಲಾಗಿದೆ ಎಂದು 7 ತಿಂಗಳ ಗರ್ಭಿಣಿ ಕನ್ನಾಟ್‌ಪ್ಲೇಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಅದೇ ಕಾನ್‌ಸ್ಟೇಬಲ್ ಮತ್ತೆ ತನ್ನ ಪತಿಯನ್ನು ಥಳಿಸಿದ್ದು, ಆತನ ಮುಖ ಪರಿಚಯ ತನಗಿದ್ದು ಎದುರಾದರೆ ಗುರುತಿಸಬಲ್ಲೆ ಎಂದು ಆಕೆ ತಿಳಿಸಿದ್ದಾಳೆ.

 ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು ಜಾಗೃತ ಇಲಾಖೆಗೆ ದೂರನ್ನು ವಹಿಸಲಾಗಿದೆ. ಅವರು ಪ್ರಕರಣದ ತನಿಖೆ ನಡೆಸಲಿದ್ದಾರೆ. ಇದುವರೆಗೆ ಕಾನ್‌ಸ್ಟೇಬಲ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News