ಸಿವಿಸಿಗೆ ಪ್ರತಿಕ್ರಿಯೆ ಸಲ್ಲಿಸಿದ ಅಲೋಕ್ ವರ್ಮಾ

Update: 2018-11-07 18:11 GMT

ಹೊಸದಿಲ್ಲಿ, ನ. 7: ಹೈದರಾಬಾದ್ ಮೂಲದ ಉದ್ಯಮಿ ಸನಾ ಸತೀಶ್ ಬಾಬು ಅವರಿಂದ 2 ಕೋಟಿ ರೂ. ಲಂಚ ಕೋರಲಾಗಿದೆ ಅಥವಾ ಸ್ವೀಕರಿಸಲಾಗಿದೆ ಎಂಬ ಆರೋಪವನ್ನು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ನೀಡಿದ ತನ್ನ ಪ್ರತಿಕ್ರಿಯೆಯಲ್ಲಿ ನಿರಾಕರಿಸಿದ್ದಾರೆ.

ಸಿಬಿಐಯ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಆರೋಪಿಸಿದಂತೆ ಮಾಂಸ ವ್ಯಾಪಾರಿ ಮೊಯಿನ್ ಖುರೇಶಿ ವಿರುದ್ಧದ ಪ್ರಕರಣದಲ್ಲಿ ತನ್ನನ್ನು ರಕ್ಷಿಸಲು ಸನಾ ಸತೀಶ್ ಬಾಬು ಲಂಚವನ್ನು ತಾನು ಲಂಚಕ್ಕೆ ಬೇಡಿಕೆ ಒಡ್ಡಿದ್ದೇನೆ ಅಥವಾ ಸ್ವೀಕರಿಸಿದ್ದೇನೆ ಎಂಬ ಅಲೋಕ್ ವರ್ಮಾ ಪ್ರತಿಕ್ರಿಯೆಯಲ್ಲಿ ನಿರಾಕರಿಸಿದ್ದಾರೆ.

ಅಸ್ತಾನಾ ಪ್ರತಿಪಾದಿಸಿದಂತೆ ಈ ಪ್ರಕರಣದಲ್ಲಿ ಬಾಬು ಸಾಕ್ಷಿಯೇ ಹೊರತು ಆರೋಪಿಯಲ್ಲ ಎಂದು ಎಂದು ವರ್ಮಾ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ತಿಳಿಸಿದ್ದಾರೆ ಎಂದು ಈ ಬೆಳವಣಿಗೆ ಬಗ್ಗೆ ಅರಿವಿರಿವ ಅಧಿಕಾರಿಗಳು ಹೇಳಿದ್ದಾರೆ. ಅಸ್ತಾನನ ಪರವಾದ ಮಧ್ಯವರ್ತಿಯೊಂದಿಗೆ ತಾನು 5 ಕೋ. ರೂ. ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಬಾಬು ಸಿಬಿಐಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಸಿಬಿಐ ದಾಖಲಿಸಿದ ಪ್ರಥಮ ಮಾಹಿತಿ ವರದಿಯ ಆರೋಪಕ್ಕೂ ಅಸ್ತಾನ ಅವರು ಅಲೋಕ್ ವರ್ಮಾ ವಿರುದ್ಧ ಮಾಡಿರುವ ಆರೋಪಕ್ಕೂ ವ್ಯತ್ಯಾಸವಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News