ನೀರವ್ ಮೋದಿ ಘೋಷಿತ ಅಪರಾಧಿ: ನ್ಯಾಯಾಲಯದ ಪ್ರಕಟನೆ

Update: 2018-11-08 14:55 GMT

ಮುಂಬೈ, ನ.8: ತಲೆಮರೆಸಿಕೊಂಡಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ತೆರಿಗೆ ಪಾವತಿಸದೆ ನುಣುಚಿಕೊಂಡ ಪ್ರಕರಣದಲ್ಲಿ ಘೋಷಿತ ಅಪರಾಧಿ ಎಂದು ಗುಜರಾತ್ ನ್ಯಾಯಾಲಯ ಪ್ರಕಟಿಸಿದ್ದು, ನವೆಂಬರ್ 15ರಂದು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ನೀರವ್ ಮೋದಿ ತೆರಿಗೆ ಪಾವತಿಸದೆ ನುಣುಚಿಕೊಂಡಿದ್ದಾರೆ ಎಂದು ಮಾರ್ಚ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಮೋದಿಗೆ ಸೂಚಿಸುವಂತೆ ಕೋರಿ ಕಳೆದ ಆಗಸ್ಟ್‌ನಲ್ಲಿ ಸೀಮಾ ಸುಂಕ ಇಲಾಖೆ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿತ್ತು. ಬಳಿಕ ಪತ್ರಿಕೆಗಳಲ್ಲಿ ನೀರವ್ ಮೋದಿ ನಾಪತ್ತೆ ಬಗ್ಗೆ ಸಾರ್ವಜನಿಕ ಪ್ರಕಟಣೆ ಪ್ರಕಟಿಸಲಾಗಿತ್ತು ಮತ್ತು ಇದರ ಪ್ರತಿಗಳನ್ನು ಸರಕಾರ ಹಾಗೂ ಪೊಲೀಸ್ ಇಲಾಖೆಗೆ ಕಳುಹಿಸಲಾಗಿತ್ತು. ಕ್ರಿಮಿನಲ್ ಪ್ರಕ್ರಿಯೆ ಕಾಯ್ದೆಯ ಸೆಕ್ಷನ್ 82ರಡಿ ಮೋದಿಯನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿದ್ದು, ಇದರಿಂದ ನಿರೀಕ್ಷಣಾ ಜಾಮೀನು ಪಡೆಯಲು ಕಷ್ಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News