×
Ad

ಹಣಕಾಸಿನ ಸಮಸ್ಯೆ: ಪಾಕ್ ಹಾಕಿ ತಂಡ ವಿಶ್ವಕಪ್‌ಗೆ ಸಂಶಯ

Update: 2018-11-08 21:59 IST

ಕರಾಚಿ, ನ.8: ಪಾಕಿಸ್ತಾನ ಹಾಕಿ ತಂಡ ಭುವನೇಶ್ವರದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಹಣಕಾಸಿನ ನೆರವು ನೀಡುವಂತೆ ಮನವಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ. ಪಿಸಿಬಿಯು ಹಣಕಾಸಿನ ನೆರವು ನೀಡುವಂತೆ ಪಾಕಿಸ್ತಾನ ಹಾಕಿ ಫೆಡರೇಶನ್ ಮಾಡಿರುವ ಮನವಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಕಿ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇನ್ನಷ್ಟು ದೂರವಾಗಿದೆ.

ಹಾಕಿ ಆಟಗಾರರಿಗೆ ಬಾಕಿಯಾಗಿರುವ ವೇತನವನ್ನು ಪಾವತಿಸಲು ಮತ್ತು ಹಾಕಿ ವಿಶ್ವಕಪ್‌ಗೆ ತಂಡವನ್ನು ಕಳುಹಿಸಲು ಸಾಲದ ನೆರವು ನೀಡುವಂತೆ ಪಿಸಿಬಿಗೆ ಪಾಕಿಸ್ತಾನ ಹಾಕಿ ಒಕ್ಕೂಟ ಮನವಿ ಮಾಡಿತ್ತು. ಆರಂಭದಲ್ಲಿ ಪಾಕಿಸ್ತಾನ ಹಾಕಿ ಒಕ್ಕೂಟ (ಪಿಎಚ್‌ಎಫ್) ಪಾಕಿಸ್ತಾನಿ ರು. 8 ಮಿಲಿಯನ್ ನೀಡುವಂತೆ ಪಾಕಿಸ್ತಾನ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಸರಕಾರ ಈ ವಿಚಾರದಲ್ಲಿ ಮೌನ ವಹಿಸಿದೆ ಎಂದು ಪಿಎಚ್‌ಎಫ್ ಕಾಯ್ದರ್ಶಿ ಶಾಬಾಝ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News