ಮಾಪಿಳ್ಳ ದಂಗೆಯ ವ್ಯಾಗನ್ ದುರಂತದ ಪೈಂಟಿಂಗ್ ಅಳಿಸಿದ ರೈಲ್ವೆ !

Update: 2018-11-08 17:36 GMT

ತಿರುವನಂತಪುರ, ನ. 8: ತಿರೂರು ರೈಲ್ವೆ ಸ್ಟೇಷನ್ ಗೋಡೆಯಲ್ಲಿ ರಚಿಸಲಾದ ಮಾಪಿಳ್ಳ ದಂಗೆಯ ಒಂದು ಭಾಗವಾದ 1921ರ ವ್ಯಾಗನ್ ದುರಂತವನ್ನು ಚಿತ್ರಿಸುವ ಮ್ಯೂರಲ್ ಪೈಂಟಿಂಗ್ ಅನ್ನು ಅಳಿಸಿರುವುದು ಕೇರಳದಲ್ಲಿ ವಿವಾದ ಹುಟ್ಟು ಹಾಕಿದೆ. ರೈಲ್ವೆ ನಿಲ್ದಾಣದಲ್ಲಿದ್ದ ಪೈಂಟಿಂಗ್ ಅನ್ನು ಅಳಿಸಿರುವುದು ಅತ್ಯಂತ ಘೋರ. ಇದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಭಾರತೀಯ ರೈಲ್ವೆ ಸಂಘ ಪರಿವಾರದ ಹಿತಾಸಕ್ತಿ ಕಾಯಲು ಪೈಂಟಿಂಗ್ ಅನ್ನು ಅಳಿಸಿದೆ ಎಂದು ವಿಜಯನ್ ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ರೈಲ್ವೆ ನಿರಾಕರಿಸಿದೆ. ಮ್ಯೂರಲ್ ವಿಷಯವನ್ನು ಟೀಕಿಸಿ ಹಲವು ಜನರು ಕರೆ ಮಾಡಿದ್ದು. ಈ ಹಿನ್ನೆಲೆಯಲ್ಲಿ ಪೈಂಟಿಂಗ್ ಮೇಲೆ ಬಣ್ಣ ಬಳಿಯಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ರೈಲ್ವೆಯ ನಿರ್ಧಾರ ಸ್ವಾಗತಾರ್ಹ. ಆದರೆ, ಈ ನಿರ್ಧಾರದ ಹಿನ್ನೆಲೆಯಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಬಿಜೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎನ್. ರಾಧಾಕೃಷ್ಣನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News