ಐದು ವರ್ಷಗಳಲ್ಲಿ ಝಿಂಬಾಬ್ವೆ ಗೆ ಮೊದಲ ಟೆಸ್ಟ್‌ ಗೆಲುವು

Update: 2018-11-08 18:25 GMT

ಸಿಲ್ಹೆತ್,ನ.8: (ಬಾಂಗ್ಲಾದೇಶ), ನ.8: ಪ್ರವಾಸಿ ಝಿಂಬಾಬ್ವೆ ತಂಡ ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ 151 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದು ಐದು ವರ್ಷಗಳಲ್ಲಿ ಟೆಸ್ಟ್‌ನಲ್ಲಿ ಝಿಂಬಾಬ್ವೆ ದಾಖಲಿಸಿದ ಮೊದಲ ಗೆಲುವು. ಇಲ್ಲಿನ ಸಿಲ್ಹೆತ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 2ನೇ ಇನಿಂಗ್ಸ್‌ನಲ್ಲಿ 321 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಆತಿಥೇಯ ಬಾಂಗ್ಲಾದೇಶ ತಂಡ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವ ಲೆಗ್ ಸ್ಪಿನ್ನರ್ ಬ್ರಾಂಡನ್ ಮಾವುತ (21ಕ್ಕೆ 4) ಮತ್ತು ಅನುಭವಿ ಆಫ್‌ಸ್ಪಿನ್ನರ್‌ಸಿಕಂದರ್ ರಾಝಾ (41ಕ್ಕೆ 3) ದಾಳಿಗೆ ಸಿಲುಕಿ 63.1 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟಾಗಿದೆ. ಬಾಂಗ್ಲಾದ ಇಮ್ರುಲ್ ಕೈಸ್ 43 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್.

ಇದರೊಂದಿಗೆ 2013ರ ಬಳಿಕ ಝಿಂಬಾಬ್ವೆ ಟೆಸ್ಟ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ.. 2013ರಲ್ಲಿ ಪಾಕಿಸ್ತಾನ ವಿರುದ್ಧ ಹರಾರೆಯಲ್ಲಿ ಝಿಂಬಾಬ್ವೆ ತನ್ನ ಕೊನೆಯ ಜಯ ದಾಖಲಿಸಿತ್ತು. ವಿದೇಶದಲ್ಲಿ 17 ವರ್ಷಗಳ ಬಳಿಕ ಮೊದಲ ಗೆಲುವಿನ ನಗೆ ಬೀರಿದೆ. 2001ರಲ್ಲಿ ಚಿತ್ತಗಾಂಗ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧವೇ ಝಿಂಬಾಬ್ವೆ ಜಯ ದಾಖಲಿಸಿತ್ತು. ಸರಣಿಯ ಎರಡನೇ ಟೆಸ್ಟ್‌ಪಂದ್ಯ ನ.11ರಿಂದ 15ರವರೆಗೆ ಢಾಕಾದಲ್ಲಿ ನಡೆಯಲಿದೆ.

 ಸಂಕ್ಷಿಪ್ತ ಸ್ಕೋರ್ ವಿವರ

►ಝಿಂಬಾಬ್ವೆ ಮೊದಲ ಇನಿಂಗ್ಸ್ 282 , 2ನೇ ಇನಿಂಗ್ಸ್181

►ಬಾಂಗ್ಲಾದೇಶ: ಮೊದಲ ಇನಿಂಗ್ಸ್ 143 , 2ನೇ ಇನಿಂಗ್ಸ್63.1 ಓವರ್‌ಗಳಲ್ಲಿ 169/10 (ಇಮ್ರುಲ್‌ಕೈಸ್ 43, ಆರಿಫುಲ್ ಹಕ್38; ಮಾವುತ 21ಕ್ಕೆ 4, ರಾಝಾ 43ಕ್ಕೆ 3, ಮಸಕಝ 33ಕ್ಕೆ 2).

 ►ಪಂದ್ಯಶ್ರೇಷ್ಠ: ಸಿಯಾನ್ ವಿಲಿಯಮ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News