ಮಾಜಿ ಪತಿ, ಇತರ ಇಬ್ಬರಿಂದ ಮಹಿಳೆಯ ಸಾಮೂಹಿಕ ಅತ್ಯಾಚಾರ

Update: 2018-11-09 15:32 GMT

(ಜಾರ್ಖಂಡ್), ನ. 9: ಜಾರ್ಖಂಡ್‌ನ ಜಾಮ್‌ತಾರಾ ಜಿಲ್ಲೆಯಲ್ಲಿ ಮಾಜಿ ಪತಿ ಸಹಿತ ಮೂವರಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಶುಕ್ರವಾರ ಮೃತಪಟ್ಟಿದ್ದಾರೆ. ಮಹಿಳೆಯ ಮಾಜಿ ಪತಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಿ.ಎನ್. ಸಿಂಗ್ ತಿಳಿಸಿದ್ದಾರೆ.

ಕಾಳಿ ಪೂಜೆ ಹಿನ್ನೆಲೆಯಲ್ಲಿ ಸಮೀಪದ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ನಾಟಕ ನೋಡಲು ಮಹಿಳೆ ಬುಧವಾರ ರಾತ್ರಿ ತೆರಳಿದ್ದರು. ಈ ಸಂದರ್ಭ ಮಾಜಿ ಪತಿ ಹಾಗೂ ಇತರ ಇಬ್ಬರು ಮಹಿಳೆಯನ್ನು ಬಲವಂತವಾಗಿ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಳಿಕ ಅವರ ಗುಪ್ತಾಂಗಕ್ಕೆ ಕೋಲು ತೂರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರು ದಿನ ಬೆಳಗ್ಗೆ ನೆರವಿಗಾಗಿ ಮಹಿಳೆ ಕೂಗುವುದು ಕೇಳಿಸಿತು. ಕೂಡಲೇ ಗ್ರಾಮಸ್ಥರು ಅವರನ್ನು ನಾರಾಯಣಪುರ ಪಟ್ಟಣದಲ್ಲಿರುವ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಂದ ಜಾಮ್‌ತಾರಾ ಸದಾರ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಆದರೆ, ಅಲ್ಲಿಗೆ ಕೊಂಡೊಯ್ದಾಗ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ.

ಗದ್ದೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದಾಗ ಮಹಿಳೆ, ತನ್ನ ಮೇಲೆ ಮಾಜಿ ಪತಿ ಹಾಗೂ ಇನ್ನಿಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News