ಶಬರಿಮಲೆ ದೇವಾಲಯ ದರ್ಶನ: ಪೊಲೀಸ್ ಪೋರ್ಟಲ್‌ನಲ್ಲಿ 500ಕ್ಕೂ ಅಧಿಕ ಮಹಿಳೆಯರ ನೋಂದಣಿ

Update: 2018-11-09 15:38 GMT

ತಿರುವನಂತಪುರ, ನ. 9: ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯಲು ಕೇರಳ ಪೊಲೀಸ್ ವೆಬ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದ 3 ಲಕ್ಷ ಜನರಲ್ಲಿ 10ರಿಂದ 50 ವರ್ಷದ ಒಳಗಿನ 539ಕ್ಕಿಂತಲೂ ಅಧಿಕ ಮಹಿಳೆಯರು ಸೇರಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುತ್ತಿರುವ ಜನರ ದಾಖಲು ನಿರ್ವಹಿಸಲು ಹಾಗೂ ವರ್ಚುವಲ್ ಸರದಿ ವ್ಯವಸ್ಥೆಗಾಗಿ ಕೆಲವು ವರ್ಷಗಳ ಹಿಂದೆ ಕೇರಳ ಪೊಲೀಸ್ ಈ ಪೋರ್ಟಲ್ ಆರಂಭಿಸಿತ್ತು.

ಈ ನಡುವೆ ಮಹಿಳೆಯರಿಗೆ ಋತುಚಕ್ರದ ವಯಸ್ಸಿನಲ್ಲಿ ದೇವಾಲಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕೇರಳ ಪೊಲೀಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕಿದ್ದರೆ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸಲ್ಲಿಸಬೇಕಿಲ್ಲ. ಕೆಎಸ್‌ಆರ್‌ಟಿಸಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ಕಾರ್ಡ್‌ಗಳ ವಿವರ ಅಗತ್ಯತೆ ಇದೆ. ಕೇರಳ ಪೊಲೀಸ್ ಪೋರ್ಟಲ್‌ಗೆ ಹೋಲಿಸಿದರೆ, ಕೆಎಸ್‌ಆರ್‌ಟಿಸಿ ಪೋರ್ಟಲ್ ತುಂಬಾ ಕಡಿಮೆ. ಅಂದರೆ ಕೇವಲ 50 ಸಾವಿರ ಮಾತ್ರ ನೋಂದಣಿಯಾಗಿದೆ. ತಿಂಗಳ ಪ್ರಾರ್ಥನೆಗಾಗಿ ನವೆಂಬರ್ 6ರಂದು ದೇವಾಲಯದ ಬಾಗಿಲು ತೆರೆದಾಗ ಪ್ರತಿಭಟನಕಾರು ಬೆದರಿಕೆ ಒಡ್ಡಿದ್ದರು ಹಾಗೂ ಓರ್ವ ಮಹಿಳೆಯನ್ನು ಹಿಂದೆ ಕಳುಹಿಸಿದ್ದರು. ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆ ದೇವಾಲಯ ಎಲ್ಲ ವಯೋಮಾನ ಮಹಿಳೆಯರಿಗೆ ಮೊದಲ ಬಾರಿಗೆ ತೆರೆದಾಗ ಅಕ್ಟೋಬರ್ 17ರಿಂದ 22ರ ವರೆಗೆ ಸಾಮೂಹಿಕ ಪ್ರತಿಭಟನೆ ನಡೆದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News