1.4 ಕೋಟಿ ‘ಉಗ್ರ’ ಸಂದೇಶ ಅಳಿಸಿಹಾಕಿದ ಫೇಸ್‌ಬುಕ್

Update: 2018-11-09 15:46 GMT

ಸ್ಯಾನ್‌ಫ್ರಾನ್ಸಿಸ್ಕೊ, ನ. 9: ಐಸಿಸ್, ಅಲ್ ಖಾಯಿದ ಮತ್ತು ಅವುಗಳೊಂದಿಗೆ ಸಂಯೋಜನೆ ಹೊಂದಿದ ಗುಂಪುಗಳಿಗೆ ಸಂಬಂಧಿಸಿದ 1.4 ಕೋಟಿಗೂ ಅಧಿಕ ‘ಭಯೋತ್ಪಾದನೆ ಸಂದೇಶ’ಗಳನ್ನು ಈ ವರ್ಷದ ಸೆಪ್ಟಂಬರ್‌ವರೆಗೆ ಅಳಿಸಿಹಾಕಿರುವುದಾಗಿ ಫೇಸ್‌ಬುಕ್ ಹೇಳಿದೆ.

2018ರ ಎರಡನೇ ತ್ರೈಮಾಸಿಕ (ಎಪ್ರಿಲ್‌ನಿಂದ ಜೂನ್)ದಲ್ಲಿ ಫೇಸ್‌ಬುಕ್ 94 ಲಕ್ಷ ಭಯೋತ್ಪಾದಕ ಸಂದೇಶಗಳನ್ನು ಅಳಿಸಿಹಾಕಿದೆ. ಅವುಗಳ ಪೈಕಿ ಹೆಚ್ಚಿನವುಗಳು ಹಳೆಯ ಸಂದೇಶಗಳು. ಅವುಗಳನ್ನು ವಿಶೇಷ ತಂತ್ರಗಳನ್ನು ಬಳಸಿ ಮರಳಿ ಫೇಸ್‌ಬುಕ್‌ನಲ್ಲಿ ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News