ಸುದ್ದಿಲೋಕಕ್ಕೆ ಕಾಲಿಟ್ಟ ‘ಕೃತಕ ಬುದ್ಧಿವಂತ’ ಸುದ್ದಿ ನಿರೂಪಕ!

Update: 2018-11-09 16:31 GMT

ಬೀಜಿಂಗ್, ನ. 9: ಚೀನಾದ ಕ್ಸಿನುವಾ ಸುದ್ದಿ ಸಂಸ್ಥೆ ಜಗತ್ತಿನ ಮೊದಲ ಕೃತಕ ಬುದ್ಧಿವಂತ (ಎಐ ಅಥವಾ ಆರ್ಟಿಫೀಶಲ್ ಇಂಟೆಲಿಜನ್ಸ್) ಸುದ್ದಿ ನಿರೂಪಕನನ್ನು ಅನಾವರಣಗೊಳಿಸಿದೆ. ಈ ಎಐ ಸುದ್ದಿ ನಿರೂಪಕ ಇಂಗ್ಲಿಷ್ ಮತ್ತು ಚೀನಿ ಭಾಷೆಯಲ್ಲಿ ಸುದ್ದಿಗಳನ್ನು ಓದಬಲ್ಲವನಾಗಿದ್ದಾನೆ.

ಸರ್ಚ್ ಇಂಜಿನ್ ಸಂಸ್ಥೆ ಸೊಗೌ ಜೊತೆಗೂಡಿ ಅಭಿವೃದ್ಧಿಪಡಿಸಿದ ನೂತನ ತಂತ್ರಜ್ಞಾನವನ್ನು ಕ್ಸಿನುವಾ, ಚೀನಾದ ವುಝನ್‌ನಲ್ಲಿ ನಡೆದ ಜಾಗತಿಕ ಇಂಟರ್‌ನೆಟ್ ಸಮ್ಮೇಳನದಲ್ಲಿ ಅನಾವರಣಗೊಳಿಸಿದೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

ಎಐ ಸುದ್ದಿ ನಿರೂಪಕರು ಮಾನವ ಆಕಾರವನ್ನು ಪಡೆದು ಸುದ್ದಿಗಳನ್ನು ಓದಬಲ್ಲವರಾಗಿದ್ದಾರೆ. ಅವರು ಕನಿಷ್ಠ ಮೌಖಿಕ ಅಭಿವ್ಯಕ್ತಿ ಮತ್ತು ತುಟಿಗಳ ಚಲನೆಯನ್ನು ಹೊಂದಿದ್ದಾರೆ ಹಾಗೂ ಅದು ನೈಜವಾಗಿ ಕಾಣುತ್ತದೆ.

ಎಐ ಸುದ್ದಿ ನಿರೂಪಕರು ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕೆಲಸ ಮಾಡಬಲ್ಲವರಾಗಿದ್ದಾರೆ.

ಸುದ್ದಿ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಸುದ್ದಿಯ ದಕ್ಷತೆಯನ್ನು ಹೆಚ್ಚಿಸಲು ಎಐ ಸುದ್ದಿ ನಿರೂಪಕರನ್ನು ಸೃಷ್ಟಿಸಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News