39 ವಿಮಾನ ನಿಲ್ದಾಣಗಳಲ್ಲಿ ಕೈಯಿಂದ ನಿರ್ವಹಿಸುವ ಬಾಂಬ್ ತಪಾಸಣೆ ಸಾಧನ
ಹೊಸದಿಲ್ಲಿ, ನ. 9: ಭೋಪಾಲ್, ಡೆಹ್ರಾಡೂನ್, ತಿರುಚ್ಚಿ ಹಾಗೂ ಜೋಧ್‌ಪುರ ಸಹಿತ 39 ವಿಮಾನ ನಿಲ್ದಾಣಗಳಲ್ಲಿ ರಿಯಲ್-ಟೈಮ್ ವೀಕ್ಷಕ ವ್ಯವಸ್ಥೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೊಂದುವುದರೊಂದಿಗೆ ಸಣ್ಣ ವಿಮಾನ ನಿಲ್ದಾಣಗಳು ಶೀಘ್ರದಲ್ಲಿ ಹೆಚ್ಚುವರಿ ಸ್ತರದ ಭದ್ರತೆಯನ್ನು ಹೊಂದಲಿವೆ.
ಈ ಉಪಕರಣ ಬಾಂಬ್ ಪತ್ತೆ ಹಚ್ಚಲು, ಅದನ್ನು ನಿಷ್ಕ್ರಿಯಗೊಳಿಸಲು, ಶಸ್ತ್ರಾಸ್ತ್ರ ಹಾಗೂ ಆಯುಧಗಳನ್ನು ಪತ್ತೆ ಹಚ್ಚಲು ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿಲ್ಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಕೊಚ್ಚಿನ್ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ತಂಡ ಕಾರ್ಯ ನಿರ್ವಹಿಸುತ್ತಿದೆ. ನಾಗರಿಕ ವಿಮಾನ ಯಾನ ಸಚಿವಾಲಯದೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಿದ ಬಳಿಕ ಅಮೃತಸರ ಈ ಪಟ್ಟಿಗೆ ಸೇರಿದೆ.
ಸ್ಫೋಟಕ ಪತ್ತೆಗೆ ಹಾಗೂ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸಲು ಸ್ಪೋಟಕ ಪತ್ತೆ ಸಾಧನ, ಬಾಂಬ್ ನಿಷ್ಕ್ರಿಯ ಸೂಟ್, ರಿಮೋಟ್‌ನಿಂದ ಕಾರ್ಯಾಚರಿಸುವ ವಾಹನಗಳ ಸಹಿತ 28 ಸಾಧನಗಳು ವಿಮಾನ ನಿಲ್ದಾಣಗಳಿಗೆ ಅಗತ್ಯತೆ ಇದೆ. ಪರಿತ್ಯಕ್ಯ ಬ್ಯಾಗ್‌ನಿಂದ ಉಂಟಾಗುವ ಬೆದರಿಕೆಯನ್ನು ಭದ್ರತಾ ಸಿಬ್ಬಂದಿ ಸುಲಭವಾಗಿ ಗುರುತಿಸಲು ರಿಯಲ್ ಟೈಮ್ ವೀಕ್ಷಕ ವ್ಯವಸ್ಥೆ (ರಿಯಲ್ ಟೈಮ್ ವ್ಯೆವಿಂಗ್ ಸಿಸ್ಟಮ್-ಆರ್‌ವಿಟಿಎಸ್) ನೆರವಾಗಲಿದೆ.
61 ವಿಮಾನ ನಿಲ್ದಾಣಗಳಲ್ಲಿ ಕೇವಲ 6ರಲ್ಲಿ ಭದ್ರತೆ ಉಸ್ತುವಾರಿ ವಹಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಮಾತ್ರ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ಹಾಗೂ ವಿಲೇವಾರಿ ಮಾಡುವ ಉಪಕರಣ ಇದೆ ಎಂದು ಪತ್ರಿಕೆಯೊಂದು ಎಪ್ರಿಲ್‌ನಲ್ಲಿ ವರದಿ ಮಾಡಿತ್ತು.