ಹೃದಯ ವೈಶಾಲ್ಯತೆಯಿಂದ ಮಾಡಿದ ಸಮಾಜಸೇವೆ ಅಳಿಯದು: ಫಾ. ಬೆಂಜಮಿನ್ ಪಿಂಟೋ

Update: 2018-11-11 13:55 GMT

ಮುಡಿಪು, ನ. 11: ಹೃದಯ ವೈಶಾಲ್ಯದಿಂದ ಮಾಡುವ ಸಮಾಜ ಸೇವೆ ಎಂದಿಗೂ ಅಳಿಯದ ಕಾರ್ಯವಾಗಿದೆ. ರಕ್ತದಾನದಂತಹ ಮಹಾನ್ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ರಕ್ತ ಎಷ್ಟು ಬಾರಿ ದಾನ ಮಾಡಿದರೂ ಕಡಿಮೆಯಾಗದ ವಸ್ತುವಾಗಿದೆ ಎಂದು ಮುಡಿಪು ಸಂತ    ಜೋಸೆಫ್‍ವಾಜ್ ಚರ್ಚ್‍ನ ಧರ್ಮಗುರು ರೆ.ಫಾ.ಬೆಂಜಮಿನ್ ಪಿಂಟೋ ಅಭಿಪ್ರಾಯಪಟ್ಟರು.

ಜೋಸೆಫ್‍ವಾಜ್ ಚರ್ಚ್, ಕೆಥೋಲಿಕ್ ಸಭಾ ಮುಡಿಪು ಘಟಕ, ಐಸಿವೈಎಂ, ಎಸ್‍ವಿಪಿ ಹಾಗೂ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಸಮೂಹ ಸಂಸ್ಥೆಯ ಸಹಕಾರದಲ್ಲಿ ಭಾನುವಾರ ಮುಡಿಪು ಚರ್ಚ್ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ ಮಾತನಾಡಿ, ಕ್ರೈಸ್ತ ಸಮುದಾಯ ಸದಾ ಸಾಮಾಜಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಾ ಬಂದಿದೆ. ಅಗತ್ಯ ಸಂದರ್ಭದಲ್ಲಿ ಮಾತ್ರವಲ್ಲದೆ ಶಿಬಿರಗಳ ಮೂಲಕವೂ ಹಲವು ಬಾರಿ ನಿರಂತರ ರಕ್ತದಾನ ಮಾಡುತ್ತಿರುವ ಕೆಥೋಲಿಕ್ ಸಭಾ ಕಾರ್ಯ ಚಟುವಟಿಕೆ ಇದಕ್ಕೊಂದು ನಿದರ್ಶನ ಎಂದು ಹೇಳಿದರು.

ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಅರುಣ್ ಡಿಸೋಜ ಮುಡಿಪು ನೇತೃತ್ವದಲ್ಲಿ ನಡೆದ ಶಿಬಿರದ ಸಭಾ ಕಾರ್ಯಕ್ರಮ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಉದ್ಘಾಟಿಸಿದರು. ಬಾಳೆಪುಣಿ ಗ್ರಾ.ಪಂ.ಅಧ್ಯಕ್ಷ ಲೀಲಾವತಿ, ಕೇಂದ್ರ ಕೆಥೋಲಿಕ್ ಸಭಾ ಅಧ್ಯಕ್ಷ ರೋಲ್ಫಿ ಡಿಕೋಸ್ತ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ, ಸರ್ಕಾರಿ ಡಿಗ್ರೂಪ್ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಮುಡಿಪು ಕೆಥೋಲಿಕ್ ಸಭಾ ಮಾಜಿ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಮಾಜಿ ಅಧ್ಯಕ್ಷ ಅರುಣ್ ಮೊಂತೆರೋ, ಡಾ.ಸೂರ್ಯ, ಮುಖ್ಯ ಅತಿಥಿಗಳಾಗಿದ್ದರು.

ಫಾದರ್ ಮುಲ್ಲರ್ ಆಸ್ಪತ್ರೆಯ ಡಾ.ಅಶ್ವಿನ್ ಮ್ಯಾಥ್ಯೂ ಮಾಹಿತಿ ನೀಡಿದರು. ಮಾರ್ಸೆಲ್ ಡಿಸೋಜ ಸ್ವಾಗತಿಸಿದರು. ಸಿಸಿಲಿಯಾ ಕುಟಿನ್ಹಾ ವಂದಿಸಿದರು. ಆ್ಯಗ್ನೆಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News