ವಿದ್ಯುತ್ ಶಾಕ್: ಮಹಿಳೆ ಮೃತ್ಯು

Update: 2018-11-11 16:41 GMT

ಶಂಕರನಾರಾಯಣ, ನ.11: ವಿದ್ಯುತ್ ಶಾಕ್‌ನಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಿದ್ದಾಪುರ ಗ್ರಾಮದ ಜನ್ಸಾಲೆ ಬಡಬಾಳು ಎಂಬಲ್ಲಿ ನ.10 ರಂದು ನಡೆದಿದೆ.

ಮೃತರನ್ನು ಜನ್ಸಾಲೆ ಬಡಬಾಳು ನಿವಾಸಿ ನಾಗಮ್ಮ(38) ಎಂದು ಗುರುತಿಸ ಲಾಗಿದೆ.

ಇವರು ಮನೆಯ ಅಡುಗೆ ಕೋಣೆಯಲ್ಲಿ ವಿದ್ಯುತ್ ಮೋಟಾರ್ ನಲ್ಲಿ ಮಜ್ಜಿಗೆ ಮಾಡುತ್ತಿರುವಾಗ ಅಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News