ನ.16ರಿಂದ ಆಳ್ವಾಸ್ ವಿಜ್ಞಾನಸಿರಿ: ವಿಜ್ಞಾನ ಮಾದರಿಗಳ ಅನಾವರಣ

Update: 2018-11-11 17:00 GMT

ಮೂಡುಬಿದಿರೆ, ನ. 11: ಆಳ್ವಾಸ್ ನುಡಿಸಿರಿ 2018ರ ಅಂಗವಾಗಿ ವಿದ್ಯಾಗಿರಿಯಲ್ಲಿ ನ.15 ರಂದು ಆಳ್ವಾಸ್ ವಿಜ್ಞಾನಸಿರಿಯ ಉದ್ಘಾಟನೆ ಉಪಗ್ರಹ ಮಾದರಿಯ ಉಡಾವಣೆಯೊಂದಿಗೆ ಶ್ರೀಮತಿ ವಿನಯಾ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಳೆದ 2 ವರ್ಷಗಳಿಂದ ಆಳ್ವಾಸ್ ವಿಜ್ಞಾನಸಿರಿ ಎನ್ನುವ ಕಾರ್ಯಕ್ರಮ ಅರ್ಥಪೂರ್ಣ ಮತ್ತು ಔಚಿತ್ಯ ಪೂರ್ಣವಾಗಿ ನುಡಿಸಿರಿಯೊಂದಿಗೆ ಜೋಡಣೆಕೊಂಡಿದೆ.  ದೇಶದ ಹೆಸರಾಂತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ವಿವಿಧ ಕಲಿಕಾ ಮಾದರಿಗಳು ವಿಜ್ಞಾನಸಿರಿಯಲ್ಲಿ ಅನಾವರಣಗೊಳ್ಳುತ್ತವೆ. ಪ್ರತಿಭಾನ್ವಿತ ಸಂಶೋಧನಾ ಪ್ರವೃತ್ತಿಯುಳ್ಳ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಪ್ರಾವಿಣ್ಯತೆಯನ್ನು ಪ್ರದರ್ಶನಕ್ಕೀಡುವ ಮತ್ತು ವಿಶಿಷ್ಟ ಪ್ರಶಸ್ತಿ ಗೆಲ್ಲುವ ಅಪರೂಪದ ಅವಕಾಶ ವಿಜ್ಞಾನ ಸಿರಿಯಲ್ಲಿದೆ.

ವಿಜ್ಞಾನಸಿರಿಯಲ್ಲಿ ಭಾಗವಹಿಸುವ ಮತ್ತು ಸಂದರ್ಶಕ ವಿದ್ಯಾಗರ್ಥಿಗಳಿಗೆ ಬೆಂಗಳೂರಿನ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ವಿವಿಧ ಉಪಗ್ರಹ ಮಾದೆರಿಗಳು, ಬೆಂಗಳೂರು ನೆಹರು ತಾರಾಲಯದ ವಿಶೇಷ ಮಾದರಿಗಳು, ಆಕಾಶ ವೀಕ್ಷಣೆಗೆ ಸಿದ್ಧಗೊಂಡಿರುವ ದೂರದರ್ಶಕ, ಮಾನವ ಶರೀರ ರಚನೆಯನ್ನು ಅರ್ಥಮಾಡಿಕೊಳ್ಳುವ ಮಾದರಿಗಳು, ವಿವಿಧ ಕೃಷಿ ಉಪಕರಣಗಳ ಪ್ರದರ್ಶನ, ಸಾವಯವ ಕೃಷಿಯ ಕುರಿತು ಮಾಹಿತಿ ಮತ್ತು ಪ್ರದರ್ಶನ, ಜೀವವಿಜ್ಞಾನ ಮತ್ತು ರಾಸಾಯನಿಕ ವಿಜ್ಞಾನದ ವಿವಿಧ ಮಾದರಿಗಳು, ಮೂಲಭೂತ ವಿಜ್ಞಾನ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ಅಗಸ್ತ್ಯ ಫೌಂಡೇಶನ್ ಮಾದರಿಗಳು ಮುಂತಾದವುಗಳ ನೇರ ಅನುಭವದಿಂದ ಕಲಿಯುವ ಅಪರೂಪದ ಅವಕಾಶ ದೊರೆಯಲಿದೆ. ಆಳ್ವಾಸ್ ಶೋಭಾವನದ ಅಪರೂಪದ ಔಷಧಿಯ ಸಸ್ಯಗಳ ವೀಕ್ಷಣೆ ಮತ್ತು ಕಲಿಕೆಗೆ ಮುಕ್ತ ಅವಕಾಶವಿದೆ. 

ಭಾಗವಹಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಮತ್ತು ನುರಿತ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಅಪರೂಪದ ಅವಕಾಶವಿದ್ದು ಕರ್ನಾಟಕ ಎಲ್ಲಾ ಜಿಲ್ಲೆಗಳ ಶಾಲಾ ಕಾಲೇಜು ಮತ್ತು ಇಂಜೀನಿಯರ್ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಊಟೋಪಚಾರ ವ್ಯವಸ್ಥೆ ಇದ್ದು ಶಾಲಾ ಕಾಲೇಜುಗಳು ಮುಖ್ಯಸ್ಥರು, ಸಿಬ್ಬಂಧಿ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಅಪರೂಪದ ಕಲಿಕಾ ಅವಕಾಶವನ್ನು ಆಳ್ವಾಸ್ ವಿಜ್ಞಾನ ಸಿರಿ ಕಾರ್ಯಕ್ರಮವನ್ನು ಉಪಯೋಗ ಪಡಿಸಿಕೊಳ್ಳಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ. ಎಂ. ಮೋಹನ ಆಳ್ವ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News