ವೈಯಕ್ತಿಕ ದುರ್ವರ್ತನೆ ಆರೋಪ: ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಲ್ ರಾಜೀನಾಮೆ

Update: 2018-11-13 16:16 GMT

ಹೊಸದಿಲ್ಲಿ,ನ.13: ವೈಯಕ್ತಿಕ ದುರ್ವರ್ತನೆ ಆರೋಪ ಎದುರಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಸ್ಥಾಪಕ ಮತ್ತು ಸಿಇಒ ಬಿನ್ನಿ ಬನ್ಸಲ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಫ್ಲಿಪ್‌ಕಾರ್ಟ್ ಮತ್ತು ಅದರ ಮಾತೃಸಂಸ್ಥೆ ವಾಲ್ಮಾರ್ಟ್ ನಡೆಸಿರುವ ತನಿಖೆಯ ವೇಳೆ ಬಿನ್ನಿ ಬನ್ಸಲ್ ಪಾರದರ್ಶಕತೆಯನ್ನು ಕಾಪಾಡಲು ವಿಫಲವಾಗಿದ್ದಾರೆ ಎಂದು ಆರೋಪಿಸಲಾಗಿರುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ವಾಲ್ಮಾರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿನ್ನಿ ಬನ್ಸಲ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ತನಿಖೆಯ ವೇಳೆ ಈ ಆರೋಪವನ್ನು ಸಾಬೀತುಪಡಿವಂಥ ಯಾವುದೇ ಪುರಾವೆಗಳು ಲಭಿಸದಿದ್ದರೂ ಈ ತನಿಖೆಯ ಅವಧಿಯಲ್ಲಿ ಬನ್ಸಲ್ ಪಾರದರ್ಶಕರಾಗಿರಲಿಲ್ಲ ಎಂದು ತನಿಖಾ ತಂಡ ಆರೋಪಿಸಿತ್ತು. ನನ್ನ ವಿರುದ್ಧ ಮಾಡಲಾಗಿರುವ ಆರೋಪದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಆಘಾತವಾಗಿದೆ. ಈ ಆರೋಪವು ಸತ್ಯಕ್ಕೆ ದೂರವಾಗಿದ್ದು ತನಿಖೆಯ ನಂತರ ಎಲ್ಲವೂ ಬಯಲಾಗಲಿದೆ. ತನಿಖೆಯ ಸಮಯದಲ್ಲಿ ನಾನು ಪಾರದರ್ಶಕವಾಗಿರಲಿಲ್ಲ ಎನ್ನುವುದು ನಿಜ. ಹಾಗಾಗಿಯೇ ನಾನು ನನ್ನ ಪದವಿಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಬಿನ್ನಿ ಬನ್ಸಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News