ಗಂಭೀರ ಅನಾರೋಗ್ಯ ಹಿನ್ನೆಲೆ: ಕ್ರಿಕೆಟ್‌ಗೆ ವಿದಾಯ ಹೇಳಿದ ಹೇಸ್ಟಿಂಗ್ಸ್

Update: 2018-11-13 18:27 GMT

ಸಿಡ್ನಿ, ನ.13: ಬೌಲಿಂಗ್ ಮಾಡುವಾಗ ರಕ್ತ ಕಫ ಬರುತ್ತಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಮಾಜಿ ಆಲ್‌ರೌಂಡರ್ ಜಾನ್ ಹೇಸ್ಟಿಂಗ್ಸ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಮುಂಬರುವ ಬಿಗ್ ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ಪರ ಆಡುವುದಿಲ್ಲ ಎಂದು ಹೇಸ್ಟಿಂಗ್ಸ್ ಹೇಳಿದ್ದಾರೆ. ‘‘ನನಗೆ ಬೌಲಿಂಗ್ ಮಾಡುವಾಗ ನನ್ನ ಶ್ವಾಸಕೋಶ ರಕ್ತನಾಳಗಳು ಸಿಡಿದು ಕೆಮ್ಮುವಾಗ ರಕ್ತ ಬರುತ್ತದೆ. ಇದೊಂದು ನಿಜಕ್ಕೂ ಭಯಾನಕ. ನಾನು ಅಭ್ಯಾಸದ ವೇಳೆ ಭಾರವನ್ನು ಎತ್ತುವಾಗ, ಬಾಕ್ಸಿಂಗ್ ಮಾಡುವಾಗ ಈ ರೀತಿ ಆಗುವುದಿಲ್ಲ. ಆದರೆ, ಬೌಲಿಂಗ್ ಮಾಡುವಾಗ ಮಾತ್ರ ಹೀಗಾಗುತ್ತದೆ. ನಾನು ಇನ್ನಷ್ಟು ತಪಾಸಣೆಗೆ ಒಳಗಾಗಬೇಕಾಗಿದೆ’’ ಎಂದು ಹೇಸ್ಟಿಂಗ್ಸ್ ಹೇಳಿದ್ದಾರೆ.

ಹೇಸ್ಟಿಂಗ್ಸ್ ಆಸ್ಟ್ರೆಲಿಯದ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ. 1 ಟೆಸ್ಟ್, 29 ಏಕದಿನ ಹಾಗೂ 9 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಹೇಸ್ಟಿಂಗ್ಸ್ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಸಿಡ್ನಿ ಸಿಕ್ಸರ್ ತಂಡವನ್ನು ಪ್ರತಿನಿಧಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News