ಸಜೀಪನಡು: ನ.15 ರಂದು ಶಾಲಾ ವಾರ್ಷಿಕೋತ್ಸವ

Update: 2018-11-14 12:47 GMT

ಬಂಟ್ವಾಳ,ನ.14: ಸರಕಾರಿ ಪ್ರೌಢಶಾಲೆ ಸಜೀಪನಡು ಇದರ ವತಿಯಿಂದ ಶಾಲಾ ವಾರ್ಷಿಕೋತ್ಸವ ಸಮಾರಂಭವು ನ.15, ಗುರುವಾರ ಬೆಳಗ್ಗೆ 10:30 ಕ್ಕೆ ಸರಕಾರಿ ಶಾಲಾ ವಠಾರದಲ್ಲಿ ನಡೆಯಲಿದೆ.

ಪ್ರಸ್ತುತ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಅಬ್ಬಾಸ್ ಹಾಜಿ ವಹಿಸಲಿದ್ದಾರೆ. ಇದೇ ವೇಳೆ, ಒಂದು ಹಂತಕ್ಕೆ ತಲುಪಿದ ಶಾಲೆಯ ಹಳೆ ವಿದ್ಯಾರ್ಥಿಗಳ ಪೈಕಿ ಮೂವರನ್ನು ಗುರುತಿಸುವ ಕಾರ್ಯಕ್ರಮ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಅಬ್ಬಾಸ್ ಹಾಜಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News