ಮಕ್ಕಳ ಸುಪ್ತ ಪ್ರತಿಭೆ ಗುರುತಿಸುವ ಹೊಣೆ ಪಾಲಕರದು: ಶಾಸ್ತ್ರಿ

Update: 2018-11-14 13:53 GMT

ಉಡುಪಿ, ನ.14: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಹೊಣೆಗಾರಿಕೆ ಪಾಲಕರ ಮತ್ತು ಸಮಾಜದ ಮೇಲಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಬದುಕು ಸುಂದರವಾಗಲು ಇಂತಹ ಕಲೆಗಳು ಅಗತ್ಯ ಎಂದು ಹಿರಿಯ ಕಲಾವಿದ ಬಿ.ಸುಬ್ರಾಯ ಶಾಸ್ತ್ರಿ ಹೇಳಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಾಹೆ ಮಣಿಪಾಲ ಇವರ ಆಶ್ರಯದಲ್ಲಿ ಬುಧವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಬಾರಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರೀ ಸ್ಮರಣಾರ್ಥ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.

ಚಿತ್ರಕಲೆ ಮಗುವಿನ ಮನಸ್ಸು ಅರಳಲು ಸಹಾಯ ಮಾಡುತ್ತದೆ. ಬಣ್ಣಗಳ ಜೊತೆಗೆ ಆಟಕ್ಕಿಳಿಯುವ ಮಕ್ಕಳು ಪ್ರಕೃತಿ, ಸಮಾಜ ಇವುಗಳ ಜೊತೆಗೆ ಒನಾಟ ಬೆಳೆಸಿಕೊಳ್ಳುತ್ತಾರೆ ಎಂದರು.

ಚಿತ್ರಕಲೆ ಮಗುವಿನ ಮನಸ್ಸು ಅರಳಲು ಸಹಾಯ ಮಾಡುತ್ತದೆ. ಬಣ್ಣಗಳ ಜೊತೆಗೆ ಆಟಕ್ಕಿಳಿಯುವ ಮಕ್ಕಳು ಪ್ರಕೃತಿ, ಸಮಾಜ ಇವುಗಳ ಜೊತೆಗೆ ಒಡನಾಟ ಬೆಳೆಸಿಕೊಳ್ಳುತ್ತಾರೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಡಾ.ನಿರಂಜನ್, ಪಾಲಕರು ಮಕ್ಕಳ ಮೇಲೆ ಅನವಶ್ಯಕ ಒತ್ತಡ ಹೇರುವುದನ್ನು ಬಿಟ್ಟು ಅವರವರ ಅಭಿರುಚಿಗೆ ತಕ್ಕಂತೆ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದರು.

ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ, ಕೇಂದ್ರದ ಆಡಳಿತಾ ಧಿಕಾರಿ ಪ್ರೊ.ಎಂ.ಎಲ್ ಸಾಮಗ ಅವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಗೋಪಿ ಹಿರೇಬೆಟ್ಟು ಹಾಗೂ ವಿಶ್ವೇಶ್ವರ ಪರ್ಕಳ ಸಹಕರಿಸಿದರು. ವೆಂಕಟೇಶ್ ಸ್ವಾಗತಿಸಿ, ಲಚ್ಚೇಂದ್ರ ವಂದಿಸಿದರು. ುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ, ಕೇಂದ್ರದ ಆಡಳಿತಾ ಧಿಕಾರಿ ಪ್ರೊ.ಎಂ.ಎಲ್ ಸಾಮಗ ಅವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಗೋಪಿ ಹಿರೇಬೆಟ್ಟು ಹಾಗೂ ವಿಶ್ವೇಶ್ವರ ಪರ್ಕಳ ಸಹಕರಿಸಿದರು. ವೆಂಕಟೇಶ್ ಸ್ವಾಗತಿಸಿ, ಲಚ್ಚೇಂದ್ರ ವಂದಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಬಹುಮಾನ ವಿಜೇತರು

ಕಿರಿಯ ಪ್ರಾಥಮಿಕ ವಿಭಾಗ: ಮೇಧಿನಿ ಭಟ್ (ಮಾಧವಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ), ಪೂರ್ವಿ ಶೆಟ್ಟಿ (ವಾಸುದೇವ ಕೃಪಾ ವಿದ್ಯಾ ಮಂದಿರ ಬೈಲೂರು), ಸಾನ್ವಿ (ಕ್ರೈಸ್ತ್ ಸ್ಕೂಲ್ ಮಣಿಪಾಲ).

ಹಿರಿಯ ಪ್ರಾಥಮಿಕ ವಿಭಾಗ: ಪ್ರಥಮ-ಸಾತ್ವಿಕ್,ಕ್ರೈಸ್ತ್ ಸ್ಕೂಲ್ ಮಣಿಪಾಲ, ದ್ವಿತೀಯ- ನವನೀತ್ ಭಟ್, ಶ್ರೀಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ ಉಡುಪಿ, ತೃತೀಯ- ನೇಹಾ, ಮಾಧವಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ.

ಪ್ರೌಢಶಾಲಾ ವಿಭಾಗ: ಪ್ರಥಮ-ಶ್ರೀಹರಿ ಪಾಡಿಗಾರ್, ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ ಉಡುಪಿ, ದ್ವಿತೀಯ-ಆದರ್ಶ್ ಭಟ್, ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ ಉಡುಪಿ, ತೃತೀಯ-ಸಂಜನಾ ಡಿ. ಮೆಂಡನ್, ಎಸ್. ಎಂ. ಎಸ್.ಆಂಗ್ಲ ಮಾಧ್ಯಮ ಶಾಲೆ, ಬ್ರಹ್ಮಾವರ.

ಪದವಿ ಪೂರ್ವ ಕಾಲೇಜು:  ಪ್ರಥಮ-ಶ್ರೀನಿಧಿ ಶೇಟ್, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ, ದ್ವಿತೀಯ-ಅದಿತಿ ಆಚಾರ್ಯ, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ, ತೃತೀಯ-ಮೇಘನಾ ಎಸ್.ಶೆಟ್ಟಿಗಾರ್, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ. ವಿಶೇಷ ಸಮಾಧಾನಕರ ಬಹುಮಾನ-ಭವಿತ್ ಬಾಬು, ರವಿಕಾಂತ್ ಆಚಾರ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News