25 ವರ್ಷಗಳಲ್ಲಿ ಮಂಗಳನ ಮೇಲೆ ಮಾನವ: ನಾಸಾ ವಿಶ್ವಾಸ

Update: 2018-11-14 15:56 GMT

ವಾಶಿಂಗ್ಟನ್, ನ. 14: ಮಾರಕ ವಿಕಿರಣ ದಾಳಿ, ಸಂಭಾವ್ಯ ದೃಷ್ಟಿಮಾಂದ್ಯ ಮತ್ತು ಮೂಳೆ ಕ್ಷಯ- ಮಂಗಳ ಗ್ರಹದ ಮೇಲೆ ಯಾರಾದರೂ ಕಾಲೂರುವ ಮುನ್ನ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಪರಿಣತರ ಅಭಿಪ್ರಾಯ.

25 ವರ್ಷಗಳಲ್ಲಿ ಮಾನವರನ್ನು ಕೆಂಪು ಗ್ರಹದ ಮೇಲೆ ಇಳಿಸಬಹುದು ಎಂಬುದಾಗಿ ನಾಸಾ ನಂಬಿದೆ. ಆದರೆ, ತಾಂತ್ರಿಕ ಮತ್ತು ವೈದ್ಯಕೀಯ ಸವಾಲುಗಳು ಅಗಾಧ.

‘‘ಈ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ, ಪ್ರಸಕ್ತ ಬಜೆಟ್ ಅಥವಾ ಕೊಂಚ ವಿಸ್ತರಿತ ಬಜೆಟ್‌ಗಳ ಆಧಾರದಲ್ಲಿ ಸುಮಾರು 25 ವರ್ಷಗಳು ಬೇಕಾಗುತ್ತವೆ’’ ಎಂದು ನಾಸಾದ ಮಾಜಿ ಖಗೋಳಯಾನಿ ಟಾಮ್ ಜೋನ್ಸ್ ಹೇಳುತ್ತಾರೆ. ಅವರು 2001ರಲ್ಲಿ ನಿವೃತ್ತಿಗೊಳ್ಳುವ ಮೊದಲು ನಾಲ್ಕು ಬಾಹ್ಯಾಕಾಶ ಯಾತ್ರೆಗಳನ್ನು ಕೈಗೊಂಡಿದ್ದಾರೆ.

 ‘‘ನಿರ್ದಿಷ್ಟ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಾವು ಇಂದಿನಿಂದಲೇ ತೊಡಗಬೇಕು’’ ಎಂದು ಅವರು ವಾಶಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಭೂಮಿಯಿಂದ 22.5 ಕೋಟಿ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹಕ್ಕೆ ಕೈಗೊಳ್ಳುವ ಯಾತ್ರೆಯು ಚಂದ್ರನ ನೆಲಕ್ಕೆ ಕೈಗೊಂಡ ಯಾತ್ರೆಗಿಂತಲೂ ಅಗಾಧ ಪಟ್ಟು ಹೆಚ್ಚಿನ ಸಮಸ್ಯೆಗಳನ್ನು ಒಡ್ಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News