ಉಮ್ರಾ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ಬಾಲಕ ವಿಮಾನದಲ್ಲಿ ಮೃತ್ಯು

Update: 2018-11-14 17:54 GMT

ದುಬೈ, ನ. 14: ತನ್ನ ಕುಟುಂಬದೊಂದಿಗೆ ಉಮ್ರಾ ಯಾತ್ರೆ ಮುಗಿಸಿದ ಬಳಿಕ ಸೌದಿ ಅರೇಬಿಯಾದಿಂದ ಹಿಂದಿರುಗುತ್ತಿದ್ದ ಕೇರಳದ ಕೋಝಿಕ್ಕೋಡಿನ ನಾಲ್ಕು ವರ್ಷದ ವಿಶೇಷ ಸಾಮರ್ಥ್ಯದ ಬಾಲಕ ವಿಮಾನದಲ್ಲಿ ಅಪಸ್ಮಾರದಿಂದ ಮೃತಪಟ್ಟಿದ್ದಾನೆ. ಒಮಾನ್ ಏರ್‌ಲೈನ್ಸ್‌ನ ವಿಮಾನ ಹಾರಾಟ ಆರಂಭಿಸಿದ 45 ನಿಮಿಷಗಳ ಬಳಿಕ ಬಾಲಕ ಯಹ್ಯಾ ಪುದಿಯಪುರಯಿಲ್ ಅಪಸ್ಮಾರಕ್ಕೆ ತುತ್ತಾಗಿ ಮೃತಪಟ್ಟ ಎಂದು ಬಾಲಕನ ಕುಟುಂಬ ತಿಳಿಸಿದೆ.

ಜಿದ್ದಾದಿಂದ ವಿಮಾನ ಏರುವಾಗ ಆತನಿಗ ಲಘು ಜ್ವರ ಬರುತ್ತಿತ್ತು. ವಿಮಾನದಲ್ಲಿ ಆತ ಅಪಸ್ಮಾರಕ್ಕೆ ಒಳಗಾದ. ಬಳಕ ಆತ ತಾಯಿಯ ಮಡಿಲಲ್ಲ ಮೃತಪಟ್ಟ ಎಂದು ಅಬುಧಾಬಿ ಯಲ್ಲಿ ವಾಸಿಸುತ್ತಿರುವ ಬಾಲಕನ ಮಾವ ಹೇಳಿದ್ದಾರೆ. ಈ ಘಟನೆಯ ಬಳಿಕ ಜಿದ್ದಾದಿಂದ ಕೇರಳದ ಕೋಝಿಕೋಡ್‌ಗೆ ತೆರಳುತ್ತಿದ್ದ ವಿಮಾನ ಸೋಮವಾರ ಅಪರಾಹ್ನ ಅಬುಧಾಬಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಒಮಾನ್ ಏರ್‌ಲೈನ್ಸ್ ಹೇಳಿದೆ. ಯಹ್ಯಾ ಪುದಿಯಪರಯಿಂಲ್ ಮಾತನಾಡಲು, ನಡೆಯಲು ಸಾಧ್ಯವಾಗದ ವಿಶೇಷ ಚೇತನ ಎಂದು ವರದಿ ಹೇಳಿದೆ. ಹುಟ್ಟಿನಿಂದಲೇ ವೀಲ್ ಚಯರ್‌ನಲ್ಲೇ ಇರುವ ಈ ಬಾಲಕ ಈಗಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಹೆತ್ತವರು, ಮಾವಂದಿರು ಹಾಗೂ ಸೋದರ ಸಂಬಂದಿಗಳು ಸೇರಿದಂತೆ 13 ಸದಸ್ಯರ ಯಾತ್ರಿಗಳ ಗುಂಪಿನಲ್ಲಿ ಈ ಬಾಲಕ ಪ್ರಯಾಣಿಸುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News