ಸಜೀಪನಡು: ನ.16ರಂದು ಹಿಫ್ಳುಲ್ ಖುರ್‌ಆನ್ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

Update: 2018-11-15 07:08 GMT

ಬಂಟ್ವಾಳ, ನ.15: ಸಜೀಪನಡುವಿನಲ್ಲಿರುವ ಶೈಖುನಾ ಮರ್‌ಹೂಂ ಸಜೀಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನಲ್ ಸೆಂಟರ್ ವತಿಯಿಂದ ನಡೆಸಲ್ಪಡುತ್ತಿರುವ ಹಿಫ್ಳುಲ್ ಕುರ್‌ಆನ್ ಕಾಲೇಜು ಮತ್ತು ಮಹಿಳಾ ಶರೀಅತ್ ಕಾಲೇಜು ಇದರ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಸಜೀಪನಡು ಶಂಸುಲ್ ಉಲಮಾ ನಗರ ಬೈಲಗುತ್ತು ಸಜೀಪನಡುವಿನಲ್ಲಿ ನ.16ರಂದು ರಾತ್ರಿ 7ಕ್ಕೆ ನಡೆಯಲಿದೆ ಎಂದು ಶೈಖುನಾ ಮರ್‌ಹೂಂ ಸಜೀಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಷನಲ್ ಸೆಂಟರ್ ಅಧ್ಯಕ್ಷ ಹಾಜಿ ಎಸ್.ಪಿ.ಮುಹಮ್ಮದ್ ಹೇಳಿದರು. 

ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ವಕ್ಫ್ ಸಚಿವ ಝಮೀರ್ ಅಹ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕೋಝಿಕ್ಕೋಡ್ ಹಿರಿಯ ಖಾಝಿ ಅಸ್ಸೈಯದ್ ನಾಸಿರ್ ಅಬ್ದುಲ್ ಹಯ್ಯೋ ಶಿಹಾಬುದ್ದೀನ್ ತಂಙಳ್ ಪಾಣಕ್ಕಾಡ್ ದುಆಗೈಯುವರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾಗಳ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಆಶೀರ್ವಚನ ನೀಡಲಿದ್ದಾರೆ ಎಂದವರು ತಿಳಿಸಿದ್ದಾರೆ.

ಸಜೀಪ ನಡು ಕೇಂದ್ರ ಜುಮಾ ಮಸೀದಿಯ ಖತೀಬ್ ಎನ್.ಎಂ.ಅಶ್ಫಾಕ್ ಫೈಝಿ, ಬೆಂಗಳೂರು ವಿ.ವಿ. ರಾಜೀವ್ ಗಾಂಧಿ ಆರೋಗ್ಯ ಸೆನಟ್ ಸದಸ್ಯ ಯು.ಟಿ.ಇಫ್ತಿಕಾರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ.ಮೋನು, ಸಜೀಪ ನಡು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ವಕ್ಫ್ ಬೋರ್ಡ್ ಜಿಲ್ಲಾಧಿಕಾರಿ ಹಾಜಿ ಅಬೂಬಕರ್, ಸಜೀಪ ಸಂಯುಕ್ತ ಜಮಾಅತ್ ಹಾಜಿ ಎಸ್.ಅಬ್ಬಾಸ್, ಪ್ರಮುಖರಾದ ಮುಹಮ್ಮದ್ ಅಲಿ, ಹಾಜಿ ಅಬ್ದುಲ್ ಖಾದರ್ ಭಾರತ್, ಎಸ್.ಕೆ.ಮುಹಮ್ಮದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಧಾರ್ಮಿಕ ಉಪನ್ಯಾಸ: ಸಭಾ ಕಾರ್ಯಕ್ರಮದ ಬಳಿಕ ಸುನ್ನಿ ವಿದ್ವಾಂಸ ಖಲೀಲ್ ಹುದವಿ ಕೇರಳ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ನಾನಾ ಕಡೆಗಳ ಧರ್ಮಗುರುಗಳಾದ ಶೈಖ್ ಅಬ್ದುಲ್ಲಾ ಮುಸ್ಲಿಯಾರ್, ಹಸನ್ ಅರ್ಶದಿ ಬೆಳ್ಳಾರೆ, ಅಬ್ದುಲ್ಲತೀಫ್ ಮುಸ್ಲಿಯಾರ್, ಇರ್ಷಾದ್ ದಾರಿಮಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬೂ ಸ್ವಾಲಿಹ್ ಫೈಝಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಅಮೀರ್ ಅರ್ಶದಿ ಸಜೀಪನಡು ಭಾಗವಹಿಸಿದ್ದಾರೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಆಸಿಫ್ ಕುನ್ನಿಲ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಎಸ್.ಅಬೂಬಕರ್, ಎಸ್ಕೆಎಸ್ಸೆಸ್ಸೆಫ್ ಅಮೀರ್ ಅರ್ಶದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News