ನಾಳೆಯಿಂದ 3 ದಿನಗಳ ಆಳ್ವಾಸ್ ನುಡಿಸಿರಿ-2018

Update: 2018-11-15 17:29 GMT
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ನುಡಿಸಿರಿಗೆ ಆಗಮಿಸುವ ಸಾಹಿತ್ಯಾಭಿಮಾನಿಗಳನ್ನು ಸ್ವಾಗತಿಸಲು ರಚಿಸಿದ ಪ್ರವೇಶ ದ್ವಾರ

ಮೂಡುಬಿದಿರೆ, ನ.15: ಕನ್ನಡ ನಾಡು-ನುಡಿ, ಸಂಸ್ಕೃತಿಯ ದಿಗ್ದರ್ಶನಕ್ಕೆ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2018’ಕ್ಕೆ ಚಾಲನೆ ಸಿಗಲಿದೆ.
ಮೂರು ದಿನಗಳ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ-2018’ ಇದರ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲು ಇಲ್ಲಿನ ವಿದ್ಯಾಗಿರಿ ಮದುವಣಗಿತ್ತಿಯಂತೆ ಶೃಂಗರಿಸಲ್ಪಟ್ಟಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಈ ಬಾರಿಯ ನುಡಿಸಿರಿಯನ್ನು ‘ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು’ ಪರಿಕಲ್ಪನೆಯಲ್ಲಿ ಹಮ್ಮಿಕೊಂಡಿದ್ದಾರೆ. ಡಾ.ಮಲ್ಲಿಕಾ ಎಸ್. ಘಂಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಡಾ.ಷ.ಶೆಟ್ಟರ್ ಉದ್ಘಾಟಿಸುವರು. ಆ ಬಳಿಕ 7 ವೇದಿಕೆಗಳಲ್ಲಿ ಏಕಕಾಲದಲ್ಲಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ವಿವಿಧೆಡೆಯ 170ಕ್ಕೂ ಹೆಚ್ಚಿನ ಕಲಾ ತಂಡಗಳಿಂದ ಸುಮಾರು 4 ಸಾವಿರ ಕಲಾವಿದರು ಸಾಂಸ್ಕೃತಿಕ ರಸದೌತಣ ನೀಡಲಿದ್ದಾರೆ.

ಮಳಿಗೆಗಳ ವೈಭವ: 750ಕ್ಕೂ ಅಧಿಕ ಮಳಿಗೆಗಳು ಬಂದಿದ್ದು ಇವುಗಳಲ್ಲಿ 400 ಮಳಿಗೆಗಳು ಕೃಷಿ ಹಾಗೂ ಇನ್ನಿತರ ಮಳಿಗೆಗಳು ಪುಸ್ತಕ, ಖಾದ್ಯ-ತಿನಿಸುಗಳನ್ನು ಹೊಂದಿರುವ ಜತೆಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೂರಾರು ಮಳಿಗೆಗಳು ತೆರೆದುಕೊಂಡು ಸಾಹಿತ್ಯಾಸಕ್ತಿಯನ್ನು ಉಲ್ಬಣಗೊಳಿಸಲಿವೆ.

ಕೃಷಿಸಿರಿ: ಕೃಷಿ ಪರಂಪರೆಯ ಉಳಿವಿಗಾಗಿ ಕೃಷಿಯ ಮಹತ್ವ ತಿಳಿಸಿಕೊಡುವ ಉದ್ದೇಶದಿಂದ ನುಡಿಸಿರಿಯಲ್ಲಿ ಕೃಷಿ ಸಿರಿಯನ್ನು ಪ್ರಧಾನ ಭಾಗವಾಗಿ ಆಯ್ದುಕೊಳ್ಳಲಾಗಿದೆ. ಕೆ.ಎಸ್.ಪುಟ್ಟಣ್ಣಯ್ಯ ಕೃಷಿ ಆವರಣದಲ್ಲಿ ಕೃಷಿ ಪರಂಪರೆ ಅನಾವರಣಗೊಳ್ಳಲಿದೆ. ಇದಕ್ಕಾಗಿ ಮೂರು ಎರೆ ಜಾಗವನ್ನು ಬಳಸಿಕೊಳ್ಳಲಾಗಿದೆ.

ಜನ ಸ್ತೋಮದ ಹರಿವು: ದಿನವೊಂದಕ್ಕೆ ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯನ್ನು ಸಂಘಟಕರು ಇಟ್ಟುಕೊಂಡಿದ್ದು ಇವರೆಲ್ಲರಿಗೂ ಕರಾವಳಿ ಜಿಲ್ಲಾ ಶೈಲಿಯ ಊಟದ ಸೊಗಡಿನ ವ್ಯವಸ್ಥೆ ಕಲ್ಪಿಸಲಾಗಿದೆ. 36 ಕಡೆ ಊಟದ ಕೌಂಟರನ್ನು ತೆರೆಯಲಾಗಿದ್ದು ಏಕಕಾಲಕ್ಕೆ ಸುಮಾರು 60 ಸಾವಿರ ಜನ ನೂಕು ನುಗ್ಗಲಿಲ್ಲದೆ ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News