ಹೆಜಮಾಡಿಯಲ್ಲಿ ಹುಚ್ಚುನಾಯಿ ಹಾವಳಿ: ಹಲವರಿಗೆ ಗಾಯ

Update: 2018-11-16 04:56 GMT
ಸಾಂದರ್ಭಿಕ ಚಿತ್ರ

ಪಡುಬಿದ್ರೆ, ನ.16: ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆಯಿಂದ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿದ್ದು, ಹಲವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.

ಶುಕ್ರವಾರ ಮುಂಜಾನೆ ಹೆಜಮಾಡಿ ಎನ್.ಎಸ್. ರಸ್ತೆಯ, ಹೆಜಮಾಡಿ ಪೇಟೆ, ಕುದ್ರುವಿನಲ್ಲಿ ಕಾಣಿಸಿಕೊಂಡಿದ್ದ ಹುಚ್ಚು ನಾಯಿ ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡಿರುವ ಹಲವರು ಮುಲ್ಕಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹುಚ್ಚುನಾಯಿ ಹಾವಳಿಯಿಂದ ಪರಿಸರದಲ್ಲಿ ಕೆಲಕಾಲ ಜನರು ಆತಂಕಕ್ಕೀಡಾಗಿದ್ದರು. ಬಳಿಕ ನಾಯಿಯನ್ನು ಜನರು ಕೊಂದು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News