ಡಿ.7-9ರವರೆಗೆ ತಾಜುಲ್ ಉಲಮಾ ಉರೂಸ್: ಕರ್ನಾಟಕ ಸ್ವಾಗತ ಸಮಿತಿ ರಚನಾ ಸಭೆ

Update: 2018-11-16 05:27 GMT

ಮಂಗಳೂರು, ನ.16: ತಾಜುಲ್ ಉಲಮಾ ಅಸ್ಸಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ಉಳ್ಳಾಲ ತಂಙಳ್ ಹೆಸರಿನಲ್ಲಿ ನಡೆಸಲ್ಪಡುವ 5ನೇ ಉರೂಸ್ ಮುಬಾರಕ್ ಡಿಸೆಂಬರ್ 7, 8, ಮತ್ತು 9ರಂದು ತಂಙಳ್ ಅಂತ್ಯವಿಶ್ರಮಿಸುತ್ತಿರುವ ಕೇರಳದ ಪಯ್ಯನ್ನೂರಿನ ಎಟ್ಟಿಕುಳಂನಲ್ಲಿ ನಡೆಯಲಿದೆ. ಈ ಪ್ರಯುಕ್ತ ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ರಚನಾ ಸಭೆಯು ಮಂಜನಾಡಿಯ ಅಲ್ ಮದೀನ ಸಂಸ್ಥೆಯಲ್ಲಿ ನಡೆಯಿತು.

ಖಾಝಿ ಸೈಯದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ಅಲ್ ಮದೀನದ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಉದ್ಘಾಟಿಸಿದರು.

ಬೆಳ್ತಂಗಡಿ ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ಅಲ್‌ಹಾದಿ ತಂಙಳ್ ಉಜಿರೆ, ಎಸ್‌ವೈಎಸ್ ಕೇರಳ ರಾಜ್ಯ ಉಪಾಧ್ಯಕ್ಷ ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ, ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ, ಎಸ್‌ಜೆಎಂ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಇದೇ ಸಂದರ್ಭ ಉರೂಸ್ ಕರ್ನಾಟಕ ಸ್ವಾಗತ ಸಮಿತಿಯನ್ನು ರಚನೆ ಮಾಡಲಾಯಿತು. ಸಲಹಾ ಸಮಿತಿಯ ಸದಸ್ಯರಾಗಿ ಸೈಯದ್ ಫಝಲ್ ಕೋಯಮ್ಮ ಕೂರತ್, ಅಸ್ಸಯ್ಯದ್ ಉಜಿರೆ ತಂಙಳ್, ಅಬ್ಬಾಸ್ ಉಸ್ತಾದ್ ಮಂಜನಾಡಿ, ಮಾಣಿ ಉಸ್ತಾದ್, ಖಾಝಿ ಬೇಕಲ್ ಉಸ್ತಾದ್, ಕಾವಲಕಟ್ಟೆ ಹಝ್ರತ್, ಬಾಳೆಪುಣಿ ಉಸ್ತಾದ್, ಇಬ್ರಾಹೀಂ ಬಾವಾ ಹಾಜಿ ಮಂಗಳೂರು ಅವರನ್ನು ಆರಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಅಸ್ಸಯ್ಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಸಂಚಾಲಕರಾಗಿ ಅಸ್ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ, ಕೋಶಾಧಿಕಾರಿಯಾಗಿ ಎಸ್.ಕೆ.ಖಾದರ್ ಹಾಜಿ ಮುಡಿಪು, ಉಪಾಧ್ಯಕ್ಷರುಗಳಾಗಿ ಫಾರೂಕ್ ಹಾಜಿ ಮಲಾಝ್, ಸಿರಾಜುದ್ದೀನ್ ಸಖಾಫಿ ಕನ್ಯಾನ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಹನೀಫ್ ಹಾಜಿ ಉಳ್ಳಾಲ, ಬಾವ ಹಾಜಿ ಏಷ್ಯನ್ ದೇರಳಕಟ್ಟೆ, ಮುಹಮ್ಮದ್ ಹಾಜಿ ಬಾಳೆಪುಣಿ, ಸಹ ಸಂಚಾಲಕರುಗಳಾಗಿ ಮುಹಮ್ಮದ್ ಮದನಿ ಸಾಮಣಿಗೆ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನ, ಶಿಹಾಬ್ ಸಖಾಫಿ ಉಳ್ಳಾಲ, ಮುನೀರ್ ಸಖಾಫಿ ಉಳ್ಳಾಲ, ಅಬ್ದುಲ್ ರಹ್ಮಾನ್ ರಝ್ವಿ ಉಡುಪಿ, ಸುಲೈಮಾನ್ ಹಾಜಿ ಸಾಮಣಿಗೆ, ಕಂಡಿಗ ಮುಹಮ್ಮದ್ ಹಾಜಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಸಯ್ಯದ್ ಜಲಾಲುದ್ದೀನ್ ತಂಙಳ್ ಉಳ್ಳಾಲ, ಜಿ.ಎಂ.ಕಾಮಿಲ್ ಸಖಾಫಿ, ಎಸ್.ಪಿ.ಹಂಝ ಸಖಾಫಿ, ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಶಾಫಿ ಸಅದಿ ಬೆಂಗಳೂರು, ಸಅದ್ ಮುಸ್ಲಿಯಾರ್ ಆತೂರು, ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ, ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಉಸ್ಮಾನ್ ಸಅದಿ ಪಟ್ಟೋರಿ, ಯು.ಎಸ್.ಹಂಝ ಹಾಜಿ ಉಳ್ಳಾಲ, ಬದ್ರುದ್ದೀನ್ ಅಝ್ಹರಿ ಸಾರ್ತಬೈಲ್, ಹಮೀದ್ ಹಾಜಿ ಸುಳ್ಯ, ಹಸನ್ ಹಾಜಿ ಸಾಂಬಾರತೋಟ, ಇಸ್ಮಾಯೀಲ್ ಗುಡ್ಡೆ ಉಳ್ಳಾಲ, ಅಡ್ವಕೇಟ್ ಇಲ್ಯಾಸ್ ನಾವುಂದ, ಮುಝಮ್ಮಿಲ್ ಕೋಟೆಪುರ, ಮೊಯ್ದಿನ್ ಹಾಜಿ ತೋಟಾಲ್, ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ, ಮುಹಮ್ಮದ್ ಅಡ್ಕರೆಪಡ್ಪು, ಅಶ್ರಫ್ ಕಿನಾರ, ಕೆ.ಎಂ.ಎಚ್.ಝುಹ್ರಿ, ಕೆ.ಕೆ.ಎಂ.ಕಾಮಿಲ್ ಸಖಾಫಿ, ಅಶ್ರಫ್ ಹಾಜಿ ದೇರಳಕಟ್ಟೆ, ಕರೀಂ ಅಸೈಗೋಳಿ, ಮೀರಾನ್ ಸಾಹಿಬ್ ಕಡಬ, ಕತರ್ ಬಾವ ಹಾಜಿ, ಅಶ್ರಫ್ ಹಾಜಿ ಬಳ್ಳಾರಿ, ಅಲ್ತಾಫ್ ಕುಂಪಲ, ಎಂ.ಎಚ್.ಖಾದರ್ ಹಾಜಿ ಉಪ್ಪಿನಂಗಡಿ, ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ, ಅಬ್ದುಲ್ ರಝ್ಝಿಕ್ ಸಖಾಫಿ ಮಡಂತ್ಯಾರ್, ಇಸ್ಹಾಕ್ ಝುಹ್ರಿ ಕಾನೆಕೆರೆ, ಉಮರ್ ಸಖಾಫಿ ಕಲ್ಮಿಂಜ, ಅಶ್ರಫ್ ಸಖಾಫಿ ಮಾಡಾವು, ಮುಸ್ತಫ ಮದನಿ ನಗರ, ಹಮೀದ್ ತಲಪಾಡಿ, ಕಲಂದರ್ ಪದ್ಮುಂಜ, ಅಬ್ಬು ಮಧ್ಯನಡ್ಕ, ಅಯ್ಯೂಬ್ ಮಹ್ಳರಿ ಮದನಿ ನಗರ, ನವಾಝ್ ಮೇಲಂಗಡಿ, ಸ್ವಯಂಸೇವಕರ ಉಸ್ತುವಾರಿಗಳಾಗಿ ಹಮೀದ್ ಹಳೇಕೋಟೆ, ಖಾಲಿದ್ ಹಾಜಿ ಭಟ್ಕಳ, ಮುಸ್ತಫ ಮಾಸ್ಟರ್ ಉಳ್ಳಾಲ, ಮೋನು ಕಲ್ಕಟ್ಟ, ಅಝೀಝ್ ಎಚ್.ಕಲ್ಲು ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ, ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಮನ್ಸೂರ್ ದಾರಂದಬಾಗಿಲು ಇವರುಗಳನ್ನು ಆರಿಸಲಾಯಿತು.

 ಕೇಂದ್ರ ಸ್ವಾಗತ ಸಂಘ ಉಪ ಸಮಿತಿಯ ಸಂಚಾಲಕ ಅಬೂ ಅನಸ್ ಎಸ್.ಕೆ.ಜಮಾಲುದ್ದೀನ್ ಮುಸ್ಲಿಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News