ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ಮೊಬೈಲ್ ಸಂವಹನ, ನಿರ್ವಹಣೆ ಕಾರ್ಯಾಗಾರ

Update: 2018-11-16 13:14 GMT

ಮಂಗಳೂರು, ನ.16: ಸೈಂಟ್ ಆ್ಯಗೆಸ್ ಕಾಲೇಜಿನಲ್ಲಿ ಮೊಬೈಲ್ ಸಂವಹನ ಮತ್ತು ನಿರ್ವಹಣೆ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ಕಾಲೇಜಿನ ಭೌತಶಾಸ್ತ್ರ ವಿಭಾಗ ಮತ್ತು ಹೊಸದಿಲ್ಲಿಯ ಡಿಬಿಟಿಯ ಸ್ಟಾರ್ ಕಾಲೇಜ್ ಸ್ಟೇಟಸ್ ಸಹಯೋಗದೊಂದಿಗೆ ನಡೆದ ಎರಡು ದಿನಗಳ ಕಾರ್ಯಾಗಾರದಲ್ಲಿ ವಿದ್ಯುತ್ , ಮೊಬೈಲ್ ಸಂವಹನ, ಮೊಬೈಲ್ ಫೋನ್ ಥಿಯರಿ, ಮೊಬೈಲ್ ಫೋನ್ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿ ರಾಜೇಶ್ ಕುಮಾರ್ ಮತ್ತು ಮೈಕಲ್ ಲೂಯಿಸ್ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜೆಸ್ವಿನಾ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಬಿಡಿಪಿಎಸ್ ಕಂಪ್ಯೂಟರ್ ಎಜ್ಯುಕೇಶನ್ ನಿರ್ದೇಶಕ ಮುರಳಿ ಎಚ್  ಭಾಗವಹಿಸಿದ್ದರು.

ಕಾರ್ಯಾಗಾರದ ಸಂಯೋಜಕರಾದ ಪ್ರೊ. ಮರಿಯೊಲಾ ಸಿ.ಪಿಂಟೊ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ಮರಿನಾ ಲೋಬೊ ಸ್ವಾಗತಿಸಿದರು. ಭಗಿನಿ ಎಂ.ಎವಿಟ್ ಪ್ರಿಯಾ ಎ.ಸಿ ವಂದಿಸಿದರು. ಲಿಡಿಯಾ ಮರಿಯಾ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ರಾಜೇಶ್ ಕುಮಾರ್ ಮತ್ತು ಮೈಕಲ್ ಲೂಯಿಸ್ ನೇತೃತ್ವದಲ್ಲಿ ಕಾರ್ಯಗಾರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಜ್ಯೋತಿಕಾ ಸ್ವಾಗತಿಸಿದರು. ಪಾರ್ವತಿ ಹನುಮಂತ್ ರಾವಡಿ ವಂದಿಸಿದರು. ಕಾರೊಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News