ನೇಜಾರು: ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

Update: 2018-11-16 13:21 GMT

ಉಡುಪಿ, ನ.16: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕ, ಉಡುಪಿ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ, ನೇಜಾರು ಜ್ಯೋತಿನಗರ ನವಾಯತ್ ವೆಲ್‌ಫೇರ್ ಅಸೋಸಿಯೇಶನ್, ವೈದ್ಯಕೀಯ ಪ್ರತಿನಿಧಿಗಳ ಸಂಘ, ಜಯಂಟ್ಸ್ ಬ್ರಹ್ಮಾವರ ಇವುಗಳ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನಾ ಚರಣೆಯ ಅಂಗವಾಗಿ ಉಚಿತ ಸಾಮಾನ್ಯ ಆರೋಗ್ಯ, ನೇತ್ರ, ದಂತ ಚಿಕಿತ್ಸಾ ಶಿಬಿರವನ್ನು ಸಂತೆಕಟ್ಟೆ ನೇಜಾರು ಉಮ್ಮೆ ಆಯಿಶಾ ಮಸೀದಿಯಲ್ಲಿ ನ.14ರಂದು ಆಯೋಜಿಸಲಾಗಿತ್ತು.

ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಪಂ ಸದಸ್ಯ ಜನಾರ್ದನ ತೋನ್ಸೆ, ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಎಸ್.ಕೋಟ್ಯಾನ್, ಸದಸ್ಯೆ ಬಾಪ್ಟಿನ್ ಡಯಾಸ್, ನವಾಯತ್ ವೆಲ್ ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಜಫ್ರುಲ್ಲಾ, ನೇಜಾರು ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಆಸ್ಪತ್ರೆಯ ವೈದ್ಯರುಗಳಾದ ಡಾ.ಸುಮನ ಆರ್.ಶೆಟ್ಟಿ, ಡಾ.ರೂಪಾಶ್ರೀ, ಡಾ.ನಾಗೇಶ್, ಡಾ.ಆರೋಸ, ಮದುಸೂಧನ್, ರೋಹಿ ರತ್ನಾಕರ್, ಅಣ್ಣಯ್ಯದಾಸ್, ರಾಘವೇಂದ್ರ ಕರ್ವಾಲು, ಮಾಧವ ಉಪಾ ಧ್ಯಾಯ, ಜಮೀಯ್ಯತುಲ್ ಫಲಾಹ್ ಕಾರ್ಯದರ್ಶಿ ಕಾಸಿಮ್ ಬಾರಕೂರು ಉಪಸ್ಥಿತರಿದ್ದರು.

ಮಸೀದಿ ಇಮಾಮ್ ವೌಲಾನ ಆದಿಲ್ ನದ್ವಿ ಕಿರಾಅತ್ ಪಠಿಸಿದರು. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ವೌಲಾ ಸ್ವಾಗತಿಸಿದರು. ನವಾಯತ್ ವೆಲ್‌ಫೇರ್‌ನ ಜಿ.ನಝೀರ್ ವಂದಿಸಿದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ಸಮೀರ್ ಎಂ., ಜೊತೆ ಕಾರ್ಯ ದರ್ಶಿ ಮುಶೀರ್ ಶೇಕ್ ಸಹಕರಿಸಿದರು. ನೂರಕ್ಕೂ ಅಧಿಕ ಶಿಬಿರಾರ್ಥಿಗಳು ಶಿಬಿದ ಪ್ರಯೋಜನ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News