ಉಡುಪಿ ಜಿಲ್ಲಾ ಮಟ್ಟದ ಸಾಯ್ಸ್ ಕ್ವೆಸ್ಟ್: ಶಿರ್ವ ಸ್ಕೂಲ್ ಪ್ರಥಮ

Update: 2018-11-16 13:22 GMT

ಶಿರ್ವ, ನ.16: ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿ ಸಲಾದ ಐದನೇ ವರ್ಷದ ಜಿಲ್ಲಾ ಮಟ್ಟದ ಸಾಯನ್ಸ್ ಕ್ವೆಸ್ಟ್ ಸ್ಪರ್ಧೆಯಲ್ಲಿ ಶಿರ್ವ ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್ ತಂಡ ಚಾಂಪಿಯನ್‌ಶಿಪ್ ಹಾಗೂ ನಿಟ್ಟೆ ಡಾ. ಎನ್.ಎಸ್.ಎ.ಎಂ. ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಗೆದ್ದು ಕೊಂಡಿವೆ.

ರಸಪ್ರಶ್ನೆ: ಪ್ರ- ಉಡುಪಿ ವಳಕಾಡು ಸರಕಾರಿ ಪ್ರೌಢಶಾಲೆ, ದ್ವಿ- ನಿಟ್ಟೆ ಶಾಲೆ, ತೃ- ಶಿರ್ವ ಸ್ಕೂಲ್, ವಿಜ್ಞಾನಿಯ ಭಾವಚಿತ್ರ ರಚನೆ: ಪ್ರ- ನಿಟ್ಟೆ ಶಾಲೆ, ದ್ವಿ- ಶಿರ್ವ ಸ್ಕೂಲ್, ತೃ- ಶಿರ್ವ ಸ್ಕೂಲ್, ತೇಪೆ ಚಿತ್ರಗಾರಿಕೆ: ಪ್ರ- ಮುದರಂಗಡಿ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ, ದ್ವಿ- ಶಿರ್ವ ಸ್ಕೂಲ್, ತೃ- ವಳಕಾಡು ಶಾಲೆ ಬಹುಮಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶಿರ್ವ ವಿಜಯ ಬ್ಯಾಂಕಿನ ಹಿರಿಯ ಪ್ರಬಂಧಕಿ ಶಿಲ್ಪ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ದರು. ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ. ಭಾಸ್ಕರ ಶೆಟ್ಟಿ ವಹಿಸಿದ್ದರು.

ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ವಸುದೀಪ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಎ. ವಂದಿಸಿದರು. ವಿದ್ಯಾರ್ಥಿನಿಯರಾದ ಪುನೀತ ಮತ್ತು ವಿಭ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News