ಜೋಕಟ್ಟೆ: ಅಸಮರ್ಪಕ ರಸ್ತೆ; ಎಸ್‌ಡಿಪಿಐ ಪ್ರತಿಭಟನೆ

Update: 2018-11-16 13:30 GMT

ಮಂಗಳೂರು, ನ.16: ಲೋಕೋಪಯೋಗಿ ಇಲಾಖೆಯ ವತಿುಂದ 1.35 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಸೇತುವೆಗೆ ಸಮರ್ಪಕ ರಸ್ತೆ ಇಲ್ಲದಿರುವುದನ್ನು ಖಂಡಿಸಿ ಎಸ್‌ಡಿಪಿಐ ಜೋಕಟ್ಟೆ ಗ್ರಾಮ ಸಮಿತಿಯು ಶುಕ್ರವಾರ ಜೋಕಟ್ಟೆಯಲ್ಲಿ ಪ್ರತಿಭಟನೆ ನಡೆಸಿತು.

ಕೇಂದ್ರ ಸರಕಾರದ ಅಧೀನದಲ್ಲಿರುವ ಎಂ.ಆರ್.ಪಿ.ಎಲ್ ಹಾಗೂ ವಿಶೇಷ ಆರ್ಥಿಕ ವಲಯ(ಸೆಝ್)ಕ್ಕೆ ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮಾಡಿಲ ಎಂಬಲ್ಲಿನ ಈ ಸೇತುವೆಗೆ ಸೂಕ್ತ ರಸ್ತೆಯೇ ಇಲ್ಲ. ಸೇತುವೆಯ ಎರಡೂ ಕೂಡು ರಸ್ತೆಗಳಿಗೆ ಮಣ್ಣು ತುಂಬಿಸುವ ಕಾಮಗಾರಿಯು ಕಳೆದ ಮಳೆಗಾಲದಲ್ಲಿ ಇನ್ನಷ್ಟು ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಿತ್ತು. ಅಂದರೆ ಅನೇಕ ವಾಹನಗಳು ಮಗುಚಿ ಬಿದ್ದು ಆತಂಕದ ಸನ್ನಿವೇಶ ಸೃಷ್ಟಿಯಾಗಿತ್ತು. ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಕೋರಿ ಎಸ್‌ಡಿಪಿಐ ಗ್ರಾಮ ಸಮಿತಿಯು ಲೋಕೋಪಯೋಗಿ ಇಲಾಖೆಗೆ ಗ್ರಾಪಂ ಮೂಲಕ ಮನವಿ ಸಲ್ಲಿಸಿತ್ತು. ಆದರೆ ಸ್ಪಂದಿಸದ ಕಾರಣ ಶುಕ್ರವಾರ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.

ಈ ಸಂದರ್ಭ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜೆಡಿಎಸ್ ನಾಯಕ ಹಾಜಿ ಬಿ. ಮುಹಮ್ಮದ್ ಗುತ್ತು, ಹಾಜಿ ಅಬ್ದುಲ್ ಖಾದರ್ ಎಚ್‌ಪಿಸಿಎಲ್, ಅಬ್ದುಲ್ ರಶೀದ್ ನಾರ್ವೆ, ಚಾಯಬ್ಬ, ಶೇಕಬ್ಬ, ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮದ್ ರಫೀಕ್, ಮುಸ್ಲಿಮ್ ಲೀಗ್ ಮುಖಂಡರಾದ ಹಾಜಿ ಎಂ.ಎಸ್. ಶರೀಫ್, ಮುಸ್ತಫಾ ನಲ್ಕೆಮಾರ್, ಖಾದರ್ ಬೊಟ್ಟು, ಬಿಎಂ ಸೈಯದ್ ಹಮೀದ್ ಈದ್ಗಾ, ಖಾದರ್ ಆಲಿಯಾಜಿ, ಮುಹಮ್ಮದ್ ಎಚ್‌ಪಿಸಿಎಲ್, ಗ್ರಾಪಂ ಸದಸ್ಯರಾದ ಫರ್ವೀಝ್ ಅಲಿ ಹಾಗೂ ಎ.ಕೆ. ಅಶ್ರಫ್ ಜೋಕಟ್ಟೆ, ಅಬ್ದುಲ್ ಖಾದರ್ ಗುಡ್ಡೆ, ಅಶ್ರಫ್ ಸಲ್ವಾ, ಸಲೀಮ್ ಬಿಎಂ ಪಾಲ್ಗೊಂಡಿದ್ದರು.

ಪ್ರತಿಭಟನೆಗೆ ಬೆಂಬಲ ಘೋಷಿಸಿ ಜೋಕಟ್ಟೆಯ ಟೆಂಪೋ ಚಾಲಕ-ಮಾಲಕರು, ಜೋಕಟ್ಟೆ ಹಾಗೂ ಪೊರ್ಕೋಡಿಯ ರಿಕ್ಷಾ ಚಾಲಕ-ಮಾಲಕರು, ಜೋಕಟ್ಟೆ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್ ಮಾಲಕ ನೌಫಾಲ್ ಮತ್ತಿತರರು ಪ್ರತಿಭಟನಾಕಾರರೊಂದಿಗೆ ಕೈ ಜೋಡಿಸಿದರು.
ಎಸ್‌ಡಿಪಿಐ ಜೋಕಟ್ಟೆ ಗ್ರಾಮ ಸಮಿತಿಯ ಅಧ್ಯಕ್ಷ ಶಿಹಾಬ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News