ನ.18: ಗ್ರಾಮಚಾವಡಿಯಲ್ಲಿ ಮೀಲಾದ್ ಜಲ್ಸ್ ಕಾರ್ಯಕ್ರಮ

Update: 2018-11-16 13:32 GMT

ಮಂಗಳೂರು, ನ.16: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ‘ಮೇಲ್ತೆನೆ’ ಸಂಘಟನೆಯ ಸಹಕಾರದೊಂದಿಗೆ ನ.18ರಂದು ಬೆಳಗ್ಗೆ 9ಕ್ಕೆ ಕೊಣಾಜೆ ಸಮೀಪದ ಗ್ರಾಮಚಾವಡಿಯ ಅಲ್ ಅಕ್ಸಾ ಜುಮಾ ಮಸೀದಿಯ ವಠಾರದಲ್ಲಿ ಮೀಲಾದ್ ಜಲ್ಸ್- ಅಂತರ್ ಮದ್ರಸ ಮೀಲಾದ್ ಪ್ರತಿಭಾ ಪಂತ-ಮೇಲ್ತೆನೆರೊ ಮುತ್ತುಙ ಪುಸ್ತಕ ಬಿಡುಗಡೆ ಹಾಗೂ ಮೀಲಾದ್ ಬ್ಯಾರಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.

ಮಸೀದಿಯ ಖತೀಬ್ ಮೌಲಾನ ಶಾಜಹಾನ್ ಮಕ್ದೂಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮದ್ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ವಿವಿ ರಿಜಿಸ್ಟ್ರಾರ್ ಪ್ರೊ.ಎ.ಎಂ. ಖಾನ್ ‘ಮೇಲ್ತೆನೆರೊ ಮುತ್ತುಙ’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದು, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಉಮರ್ ಪಜೀರ್ ಪುಸ್ತಕದ ಪರಿಚಯ ಮಾಡಲಿರುವರು. ಅಲ್ ಅಕ್ಸಾ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಮೋನು, ಅಲ್ ಅಕ್ಸಾ ಇಸ್ಲಾಮಿಕ್ ಟ್ರಸ್ಟ್‌ನ ಗೌರವಾಧ್ಯಕ್ಷ ಹನೀಫ್ ಗ್ರಾಮಚಾವಡಿ, ಮೇಲ್ತೆನೆಯ ಇಸ್ಮತ್ ಪಜೀರ್, ಮುಹಮ್ಮದ್ ಬಾಷಾ ನಾಟೆಕಲ್, ರಫೀಕ್ ಪಾಣೇಲ, ಆರೀಫ್ ಕಲ್ಕಟ್ಟ ಭಾಗವಹಿಸಲಿದ್ದಾರೆ.

ಮಿುಲಾದ್ ಬ್ಯಾರಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ವಹಿಸಲಿದ್ದು, ಅಬ್ದುಲ್ ರಹ್‌ಮಾನ್ ಕುತ್ತೆತ್ತೂರು, ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಹಂಝ ಮಲಾರ್, ಇಸ್ಮಾಯೀಲ್ ಟಿ, ಮನ್ಸೂರ್ ಸಾಮಣಿಗೆ, ಬಶೀರ್ ಕಲ್ಕಟ್ಟ, ನಿಝಾಮ್ ಬಜಾಲ್ ಕವನ ವಾಚಿಸಲಿದ್ದಾರೆ ಎಂದು ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News