ಸಂಗೀತ ಎಲ್ಲಾ ಪ್ರಕಾರಗಳನ್ನು ಸಾದರ ಪಡಿಸಿದ "ಸಂಗೀತ ಸಿಂಚನ"

Update: 2018-11-16 13:47 GMT

ಮೂಡುಬಿದಿರೆ, ವಿದ್ಯಾಗಿರಿ (ರತ್ನಾಕರವರ್ಣಿ ವೇದಿಕೆ), ನ. 16 : ಭಕ್ತಿಗೀತೆ, ಜಾನಪದ ಗೀತೆ, ದೇಶ ಭಕ್ತಗೀತೆ ಮತ್ತು ಚಲನಚಿತ್ರದ ಹಾಡುಗಳು ಸಹಿತ ಸಂಗೀತದ ಎಲ್ಲಾ ಪ್ರಕರಗಳು ಪ್ರಸ್ತುತಗೊಂಡಿದ್ದು ಬೆಂಗಳೂರಿನ ಶರಣ್ ಮ್ಯೂಸಿಕಲ್ ಅಕಾಡೆಮಿಯ ತಂಡದ "ಸಂಗೀತ ಸಿಂಚನ"ದಲ್ಲಿ. 

ನುಡಿಸಿರಿಯ ಮೊದಲ ದಿನದ ಮಧ್ಯಾಹ್ನದ ವೇಳೆಯಲ್ಲಿ ಶರಣ್ ಮ್ಯೂಸಿಕಲ್ ತಂಡದ ಪಂಡಿತ್ ಶರಣ್ ಚೌದರಿ ಅವರ ವಿನೂತನ ಶೈಲಿಯ ಹೊಸ ಪರಿಕಲ್ಪನೆಯ ಸಂಗೀತ ಸಿಂಚನವು ನುಡಿಸಿರಿ ವೇದಿಕೆಯಲ್ಲಿ 50 ನಿಮಿಷಗಳ ಪ್ರಸ್ತುತಗೊಂಡಿದ್ದು ಮೊದಲಿಗೆ ಗಾಯಕ ಶರಣ್ ಮತ್ತು ಖ್ಯಾತ ಹಿನ್ನಲೆ ಗಾಯಕಿ ವೀಣಾ ಸೂರಿ ಅವರ ಕಂಠದಲ್ಲಿ "ಪುರಂದರ ದಾಸ"ರ ಗೀತೆ "ಗಜವದನಾ ಬೇಡುವೆ ಗೌರಿ ತನಯ ಗಜವದನಾ ಬೇಡುವೆ.." ಎಂಬ ವಿನಾಯಕನ ಸ್ತುತಿಯೊಂದಿಗೆ ಆರಂಭಗೊಂಡ ಸಂಗೀತವು ನಂತರ ಬಸವೇಶ್ವವರ ಅವರ ವಚನದ "ಕಂಡ ಭಕ್ತರಿಗೆ ಕೈ ಮುಗಿವಾತನೇ ಭಕ್ತ"," ಬಿ.ಆರ್ ಲಕ್ಷ್ಮಣ್ ಅವರ ಸಾಹಿತ್ಯದ "ನನ್ನ ಮನಸ್ಸು ನವಿಲಾಗಿದೆ ಕಾರ್ಮುಗಿಲನ್ನು ಕಂಡು.." ಎಂಬ ಭಾವಗೀತೆಯು ವೀಣಾ ಸೂರಿ ಅವರ ಕಂಠ ದಿಂದ ಸುಮಧುರವಾಗಿ ಮೂಡಿ ಬಂತು ಇದಲ್ಲದೆ ಹಲವು ಹಾಡುಗಳು ಈ ತಂಡದಿಂದ ಪ್ರಸ್ತುತಗೊಂಡಿದ್ದು ಎಲ್ಲರೂ ಹಾಡಿಗೆ ತಲೆದೂಗಿದರು. 

ಮೂಲತ: ಬಾಗಲಕೋಟೆ ಜಿಲ್ಲೆಯ ಮುಧೋಳದವರಾಗಿರುವ ಪಂಡಿತ್ ಶರಣ್ ಚೌಧರಿ ಅವರು ಸಂಗೀತದ ಬಗ್ಗೆ  ಅಪಾರ ಆಸಕ್ತಿಯನ್ನು ಹೊಂದಿರುವವರು. ತಮ್ಮ 9ನೇ ವಯಸ್ಸಿನಲ್ಲಿಯೇ ಗದಗದ ಪಂಡಿತ್ ಪುಟ್ಟರಾಜ ಗವಾಯಿಗಳಿಂದ "ಕಿರಿಯ ಸಾಹಿತ್ಯ ಸಾಮ್ರಾಟ್ " ಎಂಬ ಪ್ರಶಸ್ತಿಯನ್ನು ಪಡೆದುಕೊಂಡವರು. ಅಂತರಾಷ್ಟ್ರೀಯ ಹಿಂದೂಸ್ಥಾನಿ ಹಾಗೂ ಸುಗಮ ಸಂಗೀತದ ಗಾಯಕರಾಗಿ ದೇಶ-ವಿದೇಶಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಶರಣ್ ಮ್ಯೂಸಿಕ್ ಅಕಾಡೆಮಿಯನ್ನು ನಡೆಸುತ್ತಿರುವ ಇವರು ಹಲವು ಪ್ರಶಸ್ತಿಗಳನ್ನು ಮತ್ತು ಬಿರುದುಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಆಳ್ವಾಸ್ ನುಡಿಸಿರಿಯ ವೇದಿಕೆಯಲ್ಲೂ ಇದೀಗ ತಮ್ಮ ಕಂಠಸಿರಿಯನ್ನು ಪರಿಚಯಿಸಿದ್ದಾರೆ. ಇವರ ಜೊತೆಗೆ ಇವರ ಶಿಷ್ಯರಾದ ಖ್ಯಾತ ಆಲ್ಬಂ ಸಿಂಗರ್ ರುಮಿತ್ ಕೆ. ಮತ್ತು ಯುವ ಗಾಯಕಿ ಶ್ರೇಷ್ಠ ಅವರೂ ಧ್ವನಿಯಾದರು. ಪಂಡಿತ್ ಪರಶುರಾಮ್ ಬಿಜಾಪುರ (ಕೀಬೋರ್ಡ್), ಜಲೀನ್ ಪಾಶಾ ಮುದ್ದಾಬಳ್ಳಿ ಅವರು(ತಬಲ) ಮತ್ತು ಶ್ರೀನಿವಾಸ್ ಅವರು ರಿದಂ ಪ್ಯಾಡ್‍ನಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News