ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯಿಂದ ವೇಳಾ ಪಟ್ಟಿ ಬಿಡುಗಡೆ

Update: 2018-11-16 15:52 GMT

ಮಂಗಳೂರು, ನ.16: ಉಡುಪಿ,ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗೆ ಸೇರಿದ ಕಂಬಳ ಸಮಿತಿಗಳ ಮೂಲಕ ಆಯೋಜಿಸಲಾದ ಕಂಬಳ ನವೆಂಬರ್ 24ರಿಂದ ಮಾರ್ಚ್ 23ರವರೆಗೆ ವಿವಿಧ ಕಡೆಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ನ. 24ರಂದು ಬಂಟ್ವಾಳ ತಾಲೂಕಿನ ಕಕ್ಯಪದವುನಲ್ಲಿ ಸತ್ಯ-ಧರ್ಮ ಕಂಬಳ, ಡಿ.1,ಮೂಡಬಿದ್ರೆ ಕೋಟಿ -ಚೆನ್ನಯ,ಡಿ.8ಬಾರಾಡಿ ಬೀಡು ಸೂರ್ಯಚಂದ್ರ, ಡಿ.15.ಪೈವಳಿಕೆ ಅಣ್ಣ -ತಮ್ಮ,ಡಿ.22 ಪಿಲಿಕುಳ/ಹೊಕ್ಕಡಿ ಗೋಳಿ , ಡಿ.30 ಮುಲ್ಕಿ ಸೀಮೆ ಮೂಡು-ಪಡು ಕಂಬಳ ನಡೆಯಲಿದೆ. ಜ.5.2019 ಮಿಯ್ಯಿರ್‌ನಲ್ಲಿ ಲವ-ಕುಶ,ಜ.12ರಂದು ಮಂಗಳೂರಿನಲ್ಲಿ ರಾಮ-ಲಕ್ಷ್ಮಣ ಕಂಬಳ,ಜ.20 ಪುತ್ತೂರಿನಲ್ಲಿ ಕೋಟಿ -ಚೆನ್ನಯ,ಜ.26 ಕಾಂತಬಾರೆ -ಬುದಬಾರೆ,ಫೆ.2 ಕಟಪಾಡಿ ಬೀಡುವಿನಲ್ಲಿ ಮೂಡು-ಪಡುಕಂಬಳ,ಫೆ.9ಜಪ್ಪಿನ ಮೊಗರಿನಲ್ಲಿ ಜಯ-ವಿಜಯ, ಫೆ.16ರಂದು ವಾಮಂಜೂರು-ತಿರುವೈಲಿನಲ್ಲಿ ಸಂಕುಪೂಂಜ -ದೇವು ಪೂಂಜ, ಫೆ.23ರಂದು ಅಡ್ವೆ ನಂದಿ ಕೂರಿನಲ್ಲಿ ಕೋಟಿ -ಚೆನ್ನಯ, ಮಾರ್ಚ್ 2.ಉಪ್ಪಿನಂಗಡಿಯಲ್ಲಿ ವಿಜಯ -ವಿಕ್ರಮ ಕಂಬಳ, ಮಾ.9ಬಂಗಾಡಿ ಕೊಲ್ಲಿಯಲ್ಲಿ ಸೂರ್ಯ- ಚಂದ್ರ, ಮಾರ್ಚ್ 16ರಂದು ವೇಣೂರು ಪೆರ್ಮಡದಲ್ಲಿ ಸೂರ್ಯ-ಚಂದ್ರ, ಮಾ.23ರಂದು ತಲಪಾಡಿ ಪಂಜಳದಲ್ಲಿ ಸೂರ್ಯ-ಚಂದ್ರ ಕಂಬಳ ನಡೆಯಲಿದೆ ಎಂದು ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ.

ನ್ಯಾಯಾಲಯದ ನಿರ್ದೇಶನ ಮತ್ತು ರಾಜ್ಯ ಸರಕಾರದ ಸೂಚನೆಯ ಪ್ರಕಾರ ಕಂಬಳ ನಡೆಸುವ ಸಂದರ್ಬದಲ್ಲಿ ನಿಯಮಾವಳಿಯನ್ನು ಪಾಲಿಸಲಾಗುವುದು. ಕನೆ ಹಲಗೆ, ಅಡ್ಡ ಹಲಗೆ, ನೇಗಿಲು ಹಿರಿಯ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಕಿರಿಯ ಆರು ವಿಭಾಗದಲ್ಲಿ ಕಂಬಳ ಕಂಬಳ ಸಂಘಟಕರಿಗೆ ಈ ಬಗ್ಗೆ ಮಾಹಿತಿ ನೀಡಲು ನ.21ರಂದು ಮಿಯ್ಯೆರ್‌ನಲ್ಲಿ ಕಾರ್ಕಳದ ಕಂಬಳ ಕಂಬಳ ಕ್ರೀಡಾಂಗಣದಲ್ಲಿ ಅಪರಾಹ್ನ 2ರಿಂದ 6 ಗಂಟೆಯವರೆಗೆ ಮಾಹಿತಿ ಕಾರ್ಯ ಕ್ರಮ ನಡೆಯಲಿದೆ ಎಂದು ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಂ.ರಾಜೀವ ಶೆಟ್ಟಿ,ಸಂಚಾಲಕ ಸೀತಾರಾಮ ಶೆಟ್ಟಿ,ಕಂಬಳ ಸಮಿತಿ ಸದಸ್ಯ ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News