ಮರ್ಕಝುಲ್ ಹುದಾ ಕುಂಬ್ರ; ನೂತನ ಒಮಾನ್ ಸಮಿತಿ ಅಸ್ತಿತ್ವಕ್ಕೆ

Update: 2018-11-16 16:48 GMT

ಮಂಗಳೂರು, ನ.16: ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ನೂತನ ಒಮಾನ್ ರಾಷ್ಟ್ರೀಯ ಸಮಿತಿಯನ್ನು ಇತ್ತೀಚೆಗೆ ರುವಿ ಆತ್ರಾಡಿ ಹೌಸ್‌ನಲ್ಲಿ ಸೇರಿದ ಸಮಾವೇಶದಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಇಬ್ರಾಹೀಂ ಆತ್ರಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಖ್ ಸುಳ್ಯ, ಕೋಶಾಧಿಕಾರಿಯಾಗಿ ಮುಹಮ್ಮದ್ ಫಾಝಿಲ್ ಕಂಕನಾಡಿ ಆಯ್ಕೆಯಾದರು.

ಸಮಿತಿಯ ಸಲಹೆಗಾರರಾಗಿ ಸೈಯದ್ ಆಬಿದ್ ಐದರೂಸ್ ತಂಙಳ್ ಎಮ್ಮೆಮಾಡು, ಉಮರ್ ಸಖಾಫಿ ಮಿತ್ತೂರು, ಹನೀಫ್ ಸಅದಿ ಕುಡ್ತಮುಗೇರು, ಖಾಸಿಂ ಹಾಜಿ ಅಳಕೆಮಜಲು, ಮೋನಬ್ಬ ಹಾಜಿ ಎರ್ಮಾಳ್, ಅಬ್ಬಾಸ್ ಉಚ್ಚಿಲ್, ಆರಿಫ್ ಕೋಡಿ, ಕುಂದಾಪುರ, ಇಬ್ರಾಹೀಂ ಬಾಳೆಹೊನ್ನೂರು, ಮೊಯ್ದಿನ್ ಸಾಸ್ತಾನ, ಹಾಜಿ ಅಮಾನುಲ್ಲಾ ಸಾಹೇಬ್, ನಸೀಂ ಬಾಳೆಹೊನ್ನೂರ್, ಹಂಝ ಕನ್ನಂಗಾರ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಇಕ್ಬಾಲ್ ಬೊಳ್ಮಾರ್, ಅಯ್ಯೂಬ್ ಕೋಡಿ, ಉಸ್ತಾದ್ ರಫೀಖ್ ಹೂಡೆ, ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ಬಾಳೆಹೊನ್ನೂರ್, ಬಿಲಾಲ್ ಸಾಗರ, ಅಬ್ಬಾಸ್ ಮರಕಡ ಹಾಗೂ ಕಾರ್ಯಕಾರಿ ಸದಸ್ಯರಾಗಿ ಝುಬೈರ್ ಸಅದಿ ಪಾಟ್ರಕೋಡಿ, ಬಾಷಾ ತೀರ್ಥಹಳ್ಳಿ, ಶಮೀರ್ ಉಸ್ತಾದ್ ಹೂಡೆ, ಜಸೀಂ ಕೊಪ್ಪ, ಅಬ್ದುಲ್ ಗಫಾರ್ ಹಾಜಿ ನಾವುಂದ, ಆಸಿಫ್ ಬಾಳೆಹೊನ್ನೂರ್, ರಫೀಖ್ ಖಾಝಿ ಉಡುಪಿ, ಖಾಸಿಂ ಕಣ್ಣೂರು, ಸಿದ್ದೀಖ್ ಮಾಂಬ್ಳಿ, ಇಮ್ತಿಯಾಝ್ ಕೃಷ್ಣಾಪುರ, ಅಕ್ಬರ್ ಉಪ್ಪಳ್ಳಿ, ನವಾಝ್ ಮಣಿಪುರ, ಅಬ್ಬಾಸ್ ಮಿತ್ತೂರು, ಅಬ್ಬಾಸ್ ಪಡುಬಿದ್ರೆ, ಅಬ್ದುಲ್ಲತೀಫ್ ತೋಡಾರ್, ಜುನೈದ್ ಆತ್ರಾಡಿ, ಮುಹಮ್ಮದ್ ಸಾಗರ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ಕೆಸಿಎಫ್ ಅಂತಾರಾಷ್ಟ್ರೀಯ ಮಂಡಳಿ ಆಡಳಿತ ವಿಭಾಗದ ಅಧ್ಯಕ್ಷ ಉಮರ್ ಸಖಾಫಿ ಮಿತ್ತೂರು ಉದ್ಘಾಟಿಸಿದರು. ಮರ್ಕಝುಲ್ ಹುದಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಹಾಜಿ ಇಬ್ರಾಹೀಂ ಆತ್ರಾಡಿ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಸಂಚಾಲಕ ಉಬೈದ್ ಸಖಾಫಿ ಮಿತ್ತೂರು ಸ್ವಾಗತಿಸಿದರು. ಸ್ವಾದಿಖ್ ಸುಳ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News