ಕ್ರೆಸೆಂಟ್ ಇಂಟರ್ ನ್ಯಾಷನಲ್ ಸ್ಕೂಲ್: ಸಿಬಿಎಸ್ ಕ್ಲಾಸ್, ಕಂಪೋಸಿಟ್ ಲ್ಯಾಬ್ ಉದ್ಘಾಟನೆ

Update: 2018-11-17 13:20 GMT

ಮಂಗಳೂರು, ನ.17: ಕ್ರೆಸೆಂಟ್ ಇಂಟರ್‌ ನ್ಯಾಷನಲ್ ಸ್ಕೂಲ್ ಇಲ್ಮ್‌ ಸಿಟಿ ಚಂದ್ರನಗರ ಇದರ ಸಿಬಿಎಸ್. ಕ್ಲಾಸ್ ಹಾಗೂ ಕಂಪೋಸಿಟ್ ಲ್ಯಾಬ್‌ನ್ನು ಆಹಾರ, ನಾಗರಿಕ ಪೂರೈಕೆ ಮತ್ತು ವಕ್ಫ್ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು.

ಈ ಸಂದರ್ಭ ಸಚಿವರನ್ನು ಕ್ರೆಸೆಂಟ್ ಸ್ಕೂಲ್‌ನ ಸಂಚಾಲಕ ಶಂಸುದ್ದೀನ್ ಯೂಸುಫ್ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಈ ಸ್ಕೂಲ್ ಗ್ರಾಮೀಣ ಪ್ರದೇಶದಲ್ಲಿದ್ದು ಈ ಭಾಗದ ಜನರಿಗೆ ವಿದ್ಯಾಭ್ಯಾಸಕ್ಕೆ ಉತ್ತಮ ಸಹಕಾರಿಯಾಗಿದ್ದು ಭವಿಷ್ಯದಲ್ಲಿ ಈ ಭಾಗ ಉತ್ತಮ ವಿದ್ಯಾ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಈ ಸಂದರ್ಭ ಕ್ರೆಸೆಂಟ್ ಸ್ಕೂಲ್‌ನ ಆಡಳಿತಾಧಿಕಾರಿ ಲೀಲು ಸನಾ, ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ಜಿ.ಎ.ಬಾವ, ಎಂ.ಎ.ಗಫೂರ್, ಕಣಚೂರು ಮೋನು, ಕೆಪಿಸಿಸಿ ಅಲ್ಪಸಂಖ್ಯಾತ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ಹೆಜಮಾಡಿ, ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಸಂಯೋಜಕ ಮುಹಮ್ಮದ್ ಫಾರೂಕ್ ಚಂದ್ರನಗರ, ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಪಿ. ಇಬ್ರಾಹೀಂ, ಇಸ್ಮಾಯೀಲ್ ಅತ್ರಾಡಿ, ತಾಪಂ ಸದಸ್ಯರಾದ ಶೇಖಬ್ಬ ಉಚ್ಚಿಲ್, ಯಾಸೀನ್ ಹೆಮ್ಮಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News