'ವಿರಾಟ್ ಕೊಹ್ಲಿ ಮಲಬಾರ್ ಟಿಸ್ಸಾಟ್ ವಿಶೇಷ ಆವೃತ್ತಿ' ವಾಚ್ ಅನಾವರಣ

Update: 2018-11-17 14:02 GMT

ಮಂಗಳೂರು, ನ.17: ಭಾರತೀಯ ಕ್ರೀಡಾಪಟು ವಿರಾಟ್ ಕೊಹ್ಲಿ ಜನ್ಮದಿನದ ಪ್ರಯುಕ್ತ ವಿರಾಟ್ ಕೊಹ್ಲಿ ಕ್ರೋನೊ ಎಕ್ಸ್‌ಎಲ್ ಕ್ಲಾಸಿಕ್ ಮಲಬಾರ್ ಟಿಸ್ಸಾಟ್ ವಿಶೇಷ ಆವೃತ್ತಿ ವಾಚ್‌ನ್ನು ನಗರದ ಫೋರಮ್ ಫಿಝಾ ಮಾಲ್‌ನಲ್ಲಿ ಶನಿವಾರ ಮಲಬಾರ್‌ನ ಪ್ರಥಮ ಗ್ರಾಹಕ ಸುನೀಲ್ ಸ್ಟೆಫನ್ ವರ್ಗೀಸ್ ಅನಾವರಣಗೊಳಿಸಿದರು.

ವಿರಾಟ್ ಕೊಹ್ಲಿ ಕ್ರೋನೊ ಎಕ್ಸ್‌ಎಲ್ ಕ್ಲಾಸಿಕ್ ಮಲಬಾರ್ ಟಿಸ್ಸಾಟ್ ವಿಶೇಷ ಆವೃತ್ತಿ ವಾಚ್‌ನ್ನು ದೇಶದ ವಿವಿಧೆಡೆ ಅನಾವರಣಗೊಳಿಸಲಾಯಿತು.

ಸಮಾರಂಭದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸ್ಟೋರ್ ಹೆಡ್ ಶರತ್ ಚಂದ್ರನ್, ಮಲಬಾರ್ ವಾಚೆಸ್‌ನ ಡೆಪ್ಯೂಟಿ ಹೆಡ್ ಝಿಬಿನ್ ಅಲಿ ಹಸನ್ ಹಾಗೂ ಮಾಲ್ ಆಪರೇಶನ್ಸ್‌ನ ಸೆಂಟರ್ ಮ್ಯಾನೇಜರ್ ಫಯಾಝ್ ಎಂ.ಎಚ್., ಮಲಬಾರ್ ವಾಚೆಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಕೃಷ್ಣಪ್ರಸಾದ್, ಮಾರ್ಕೆಟಿಂಗ್‌ಮತ್ತು ಕಮ್ಯೂನಿಕೇಶನ್ಸ್‌ನ ಮ್ಯಾನೇಜರ್ ಸುನೀಲ್ ಕೆ.ಎಸ್., ಮಲಬಾರ್ ವಾಚೆಸ್ ಸ್ಟೋರ್ ಮ್ಯಾನೇಜರ್ ದಾನಿಶ್ ಮತ್ತಿತರರು ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ಟಿಸ್ಸಾಟ್ ವಿಶೇಷತೆ

ವಿರಾಟ್ ಕೊಹ್ಲಿ ಟಿಸ್ಸಾಟ್ 3,018 ನಿಯಮಿತ ವಾಚ್‌ಗಳು ಲಭ್ಯಯಿವೆ. ಇದರಲ್ಲಿ 30 ವಾಚ್‌ಗಳು ವಿರಾಟ್ ಕೊಹ್ಲಿ ಅವರ ಜನ್ಮ ದಿನದ ಪ್ರಯುಕ್ತ ಬಿಡುಗಡೆಗೊಂಡಿದ್ದು, ವಿರಾಟ್ ಕೊಹ್ಲಿ ಅವರ ಜೆರ್ಸಿ ‘ನಂ.18’ಕ್ಕೆ ಸಂಬಂಧಿಸಿದಂತೆ 18 ವಾಚ್‌ಗಳು ಮಾರಾಟಕ್ಕೆ ಲಭ್ಯಯಿವೆ. ನೇವಿ ಬ್ಲೂ (ನೌಕಾನೀಲಿ) ಬಣ್ಣದ ಲೋಗೋ ಮತ್ತು ವಿರಾಟ್ ಕೊಹ್ಲಿಯ ಸಿಗ್ನೇಚರ್‌ನ್ನು ವಾಚ್‌ನಲ್ಲಿ ಕೆತ್ತನೆ ಮಾಡಲಾಗಿದೆ.

ನೂತನ ವಾಚ್‌ನಲ್ಲಿ ನೇವಿ ಬ್ಲೂ ಬಣ್ಣದ ಲೆದರ್ ಪಟ್ಟಿಯನ್ನು ಅಳವಡಿಸಲಾಗಿದೆ. ಸ್ಟಾಪ್‌ವಾಚ್ ನಂಬರ್ 20ನ್ನು ಬದಲಾಯಿಸಿ ವಿರಾಟ್ ಕೊಹ್ಲಿ ಅವರ ‘18’ ನಂಬರ್‌ನ್ನು ಬಳಸಿಕೊಳ್ಳಲಾಗಿದ್ದು, ಆ ನಂಬರ್‌ನ್ನು ಕೆಂಪು ಬಣ್ಣದಿಂದ ಗುರುತಿಸಲಾಗಿದೆ. ಈ ನಂಬರ್ ಮತ್ತು ಕೆಂಪು ಬಣ್ಣವು ಸ್ವಿಸ್ ದೇಶದ ಧ್ವಜವನ್ನು ಪ್ರತಿನಿಧಿಸುತ್ತದೆ. ಈ ನೂತನ ವಾಚ್‌ನ ಮೌಲ್ಯ ಕೇವಲ 24,000 ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News