ಮಂಗಳೂರು: ರಾಜ್ಯ ಸರಕಾರಿ ನೌರರ ಸಂಘದ ವಿಭಾಗೀಯ ಸಮಾವೇಶ

Update: 2018-11-17 14:51 GMT

ಮಂಗಳೂರು, ನ.17: ರಾಜ್ಯ ಸರಕಾರಿ ನೌಕರರ ಸಂಘದ ಮೈಸೂರು ವಿಭಾಗ ಮಟ್ಟದ ಚುನಾಯಿತ ಪ್ರತಿನಿಧಿಗಳ ಸಮಾವೇಶ ಶನಿವಾರ ನಗರದ ಪುರಭವನದಲ್ಲಿ ಜರುಗಿತು.

ಸಮಾವೇಶವನ್ನು ವಿಧಾನಪರಿಷತ್ ಸದಸ್ಯ ಆುನೂರು ಮಂಜುನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ ತೀರಾ ಅವೈಜ್ಞ್ಞಾನಿಕವಾಗಿದೆ. ಇದನ್ನು ರದ್ದುಪಡಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಸರಕಾರಿ ವ್ಯವಸ್ಥೆಯಲ್ಲಿ ಪ್ರಮುಖ ಆಧಾರಸ್ಥಂಭವಾಗಿರುವ ಅಧಿಕಾರಿಗಳು ಮತ್ತು ನೌಕರರ ಬೇಡಿಕೆಗಳನ್ನು ರಾಜ್ಯ ಸರಕಾರವು ಸಂವೇದನೆಯಿಂದ ಪರಿಗಣಿಸಬೇಕು ಎಂದು ಹೇಳಿದರು.

ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ ಮಾತನಾಡಿ, ಸರಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ. ರಾಮು ಮತನಾಡಿ, ಕರ್ನಾಟಕ ಸರಕಾರಿ ನೌಕರರ ಸಂಘವು ರಾಜ್ಯ 6ನೇ ವೇತನ ಆಯೋಗದ ಪ್ರಥಮ ವರದಿಯ ಶಿಫಾರಸ್ಸುಗಳನ್ವಯ ಪರಿಷ್ಕರಿಸಲ್ಪಟ್ಟಿರುವ ಪರಿಷ್ಕತ ವೇತನ ಶ್ರೇಣಿಗಳಲ್ಲಿ ಉಂಟಾಗಿರುವ ನ್ಯೂನ್ಯತೆ ಸರಿಪಡಿಸಲು ಹಾಗೂ ಪ್ರಥಮ ವರದಿಯಲ್ಲಿನ ಇತರೆ ಶಿಫಾರಸ್ಸುಗಳ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅಣ್ಣಿಗೇರಿ, ಗೌರವಾಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಕೋಶಾಧಿಕಾರಿ ಷಡಕ್ಷರಿ, ದ.ಕ. ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ಉಡುಪಿ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News