ಮೊಬೈಲ್ ಸುಲಿಗೆ ಪ್ರಕರಣ: ಆರೋಪಿಯ ಬಂಧನ

Update: 2018-11-17 17:39 GMT

ಮಂಗಳೂರು, ನ.17: ನಗರದ ಮಾಲ್‌ವೊಂದರಲ್ಲಿ ಮಹಿಳೆಯೊಬ್ಬರ ಪರ್ಸ್ ಹಾಗೂ ಮೊಬೈಲ್ ಸುಲಿಗೆ ಮಾಡಿ ನಾಪತ್ತೆಯಾಗಿದ್ದ ಆರೋಪಿಯನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಟ್ವಾಳ ಕಸಬಾ ಗ್ರಾಮ ಮೇಲಿನ ಪನಂಗಿಲ ನಿವಾಸಿ ಮ್ಯಾಕ್ಸಿಂ ಆಲ್ವಿನ್ ರೋಡ್ರಿಗಸ್ (35) ಬಂಧಿತ ಆರೋಪಿ.

ಒಂದು ವರ್ಷದ ಹಿಂದೆ ಈತ ಬಿಜೈಯಲ್ಲಿರುವ ಮಾಲ್‌ವೊಂದರ 2ನೇ ಮಹಡಿಯಲ್ಲಿ ಮಹಿಳೆಯ ಪರ್ಸ್ ಹಾಗೂ ಮೊಬೈಲ್ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ. ಈತನನ್ನು ಶನಿವಾರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ. ಈತನಿಂದ 2 ಮೊಬೈಲ್ ಹಾಗೂ 150 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಕೇಂದ್ರ ಉಪವಿಭಾಗದ ರೌಡಿ ನಿಗ್ರಹದಳದ ಅಧಿಕಾರಿ ಹಾಗೂ ಸಿಬ್ಬಂದಿ, ಉರ್ವ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News