ದ.ಕ. ಜಿಲ್ಲಾ ಮಟ್ಟದ ಈಜು ಸ್ಪರ್ಧೆ: 100 ಪದಕಗಳನ್ನು ಗೆದ್ದು ದಾಖಲೆ ಸೃಷ್ಟಿಸಿದ ಮಂಗಳಾ ಈಜು ಕ್ಲಬ್‍ ಸದಸ್ಯರು

Update: 2018-11-18 05:44 GMT

ಮಂಗಳೂರು, ನ. 18: ನಗರದ ಪ್ರೆಸಿಡೆನ್ಸಿ ಸಿಬಿಎಸ್‍ಇ ಸ್ಕೂಲ್ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವಿಧ ಶಾಲೆಗಳನ್ನು ಪ್ರತಿನಿಧಿಸಿದ ಮಂಗಳಾ ಈಜು ಕ್ಲಬ್‍ ಸದಸ್ಯರು ವಿವಿಧ ಗುಂಪುಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ, 40 ಚಿನ್ನ, 35 ಬೆಳ್ಳಿ, 25 ಕಂಚಿನ ಪದಕಗಳನ್ನು ಗಳಿಸಿರುತ್ತಾರೆ.

ಗಗನ್ ಜಿ. ಪ್ರಭು, ಗ್ರಹಿತ್ ಜಿ. ಪ್ರಭು, ವಿಯೊನ್ ಡಿ’ಸೋಜಾ, ಚಿಂತನ್ ಶೆಟ್ಟಿ ಇವರುಗಳು ತಾವು ಸ್ಪರ್ಧಿಸಿದ ಗುಂಪುಗಳಲ್ಲಿ ವೈಯಕ್ತಿಕ ಚಾಂಪಿಯನ್‍ಶಿಪ್ ಗಳಿಸಿಕೊಂಡಿರುತ್ತಾರೆ.

ವಿಯೊನ್ ಡಿ’ಸೋಜಾ – 3 ಚಿನ್ನ, 2 ಬೆಳ್ಳಿ, ನಿಶಾಂತ್ ಮಲ್ಯ – 2 ಬೆಳ್ಳಿ, 1 ಕಂಚು, ಮಿಥುಲ್ ಶೆಟ್ಟಿ – 2 ಚಿನ್ನ, 2 ಬೆಳ್ಳಿ, 1 ಕಂಚು, ಡಯಲಾನ್ – 1 ಚಿನ್ನ, ಶಮಂತ್ – 2 ಚಿನ್ನ, 1 ಬೆಳ್ಳಿ, 1 ಕಂಚು, ಕೀರ್ತನ್ ಬೋಳೂರು – 1 ಚಿನ್ನ, 1 ಕಂಚು (ಸೈಂಟ್ ಅಲೋಶಿಯಸ್ ಹೈಸ್ಕೂಲ್, ಉರ್ವಾ) ಗಗನ್ ಜಿ. ಪ್ರಭು – 3 ಚಿನ್ನ, 2 ಕಂಚು, ಚಿಂತನ್ ಶೆಟ್ಟಿ – 3 ಚಿನ್ನ, 2 ಬೆಳ್ಳಿ, ಗ್ರಹಿತ್ ಜಿ. ಪ್ರಭು – 3 ಚಿನ್ನ, 2 ಬೆಳ್ಳಿ, ನೈತಿಕ್ ಎನ್. – 3 ಬೆಳ್ಳಿ, 1 ಕಂಚು, ಗ್ಯಾನ್ – 2 ಚಿನ್ನ, 1 ಕಂಚು, ವೈಷ್ಣವ್ ಶೆಟ್ಟಿ – 2 ಚಿನ್ನ, ಭವಿಷ್ – 2 ಬೆಳ್ಳಿ, ಅವನಿ ಡಿ. – 1 ಬೆಳ್ಳಿ, 1 ಕಂಚು (ಶಾರದಾ ವಿದ್ಯಾಲಯ), ಪ್ರಿವನ್ – 1 ಚಿನ್ನ, 1 ಬೆಳ್ಳಿ, 1 ಕಂಚು, ಶಮಿತ್ ಆರ್. ಕುಮಾರ್ – 3 ಬೆಳ್ಳಿ (ಲೂಡ್ರ್ಸ್ ಸ್ಕೂಲ್, ಬಿಜೈ), ಸಮಿತ್ ಕ್ಷೇವಿಯರ್ – 1 ಬೆಳ್ಳಿ, ಅಭಿನವ್ – 2 ಕಂಚು, ಸಾಕ್ಷಿ ಕರ್ಕಡ – 1 ಕಂಚು, ರಿಷಭ್ – 1 ಕಂಚು (ಸೈಂಟ್ ಅಲೋಶಿಯಸ್ ಹೈಸ್ಕೂಲ್, ಗೊಂಝಾಗ), ಅಭಿರೂಪ್ ಎಲ್ – 1 ಕಂಚು (ಸೈಂಟ್ ಅಲೋಶಿಯಸ್ ಹೈಸ್ಕೂಲ್, ಕೊಡಿಯಾಲ್‍ ಬೈಲ್), ಅಗಸ್ತ್ಯ ಎಂ. ಗಟ್ಟಿ – 1 ಚಿನ್ನ, 1 ಬೆಳ್ಳಿ, ಸಾತ್ವಿಕ್ ನಾಯಕ್ – 2 ಬೆಳ್ಳಿ, 1 ಕಂಚು, ನಿಯತಿ ನಾಯಕ್ – 1 ಬೆಳ್ಳಿ, 1 ಕಂಚು, ರಿಷಾ ಪಿ. ಶೆಟ್ಟಿ – 2 ಬೆಳ್ಳಿ, 1 ಕಂಚು, ರಾಶಿ ಪಿ. ಶೆಟ್ಟಿ – 1 ಕಂಚು, ಅಗಮ್ಯ – 1 ಚಿನ್ನ, 1 ಬೆಳ್ಳಿ, 1 ಕಂಚು, ಅಭಿಜ್ಞ – 1 ಬೆಳ್ಳಿ, 1 ಕಂಚು (ಕೆನರಾ ಸಿಬಿಎಸ್‍ಇ, ಮಂಗಳೂರು), ಪರೀಕ್ಷಿತ್ – 3 ಕಂಚು, ರಿಚಲ್ – 2 ಬೆಳ್ಳಿ, 1 ಕಂಚು (ಸೈಂಟ್ ಥೆರೆಸಾ) ಪುಣ್ಯ ಆರ್. ಹೆಗ್ಡೆ – 2 ಚಿನ್ನ, 1 ಬೆಳ್ಳಿ, 1 ಕಂಚು, ಸಮಂತಾ – 3 ಚಿನ್ನ, 2 ಬೆಳ್ಳಿ, (ಕೆಂಬ್ರಿಡ್ಜ್ ಸ್ಕೂಲ್) ಆರ್ನಾ ಎಂ.ಪಿ. – 2 ಬೆಳ್ಳಿ (ಮಧುಸೂದನ್ ಕುಶೆ ಹೈಸ್ಕೂಲ್, ಮಂಗಳೂರು) ಸಾನಿಧ್ಯ – 2 ಚಿನ್ನ, 1 ಬೆಳ್ಳಿ (ಲೇಡಿಹಿಲ್ ಹೈಸ್ಕೂಲ್, ಲೇಡಿಹಿಲ್). ಪ್ರಕೃತಿ – 1 ಚಿನ್ನ, 1 ಕಂಚು (ಕೆನರಾ ಪ್ರೈಮರಿ, ಡೊಂಗರಕೇರಿ), ನಿಶ್ರೀನ್ – 1 ಕಂಚು (ಕಾರ್ಮೆಲ್, ಬೋಳಾರ) ಅವರು ಕ್ಲಬ್ಬಿನ ಮುಖ್ಯ ತರಬೇತುದಾರರಾದ  ಲೋಕರಾಜ್ ವಿಟ್ಲ ಮತ್ತು ಸಹಾಯಕ ತರಬೇತುದಾರ  ಎಂ. ಶಿವಾನಂದ ಗಟ್ಟಿ, ಪುಂಡಲೀಕ್ ಖಾರ್ವಿ, ಶಿಶಿರ್ ಎಸ್. ಗಟ್ಟಿ, ಶುಭಂ ಮತ್ತು ಸುಶಾಂತ್ ಇವರಿಂದ ನಗರದ ಕಾಪೊರೇಷನ್ ಈಜುಕೊಳ ಹಾಗೂ ಸೈಂಟ್ ಅಲೋಶಿಯಸ್ ವಿದ್ಯಾಸಂಸ್ಥೆಯ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News