ವಿಶ್ವ ಮಧುಮೇಹ ದಿನಾಚರಣೆ: ಉಚಿತ ಕಣ್ಣಿನ ತಪಾಸಣಾ ಶಿಬಿರ

Update: 2018-11-18 11:33 GMT

ಉಡುಪಿ, ನ.18: ಮಧುಮೇಹ ಖಾಯಿಲೆಯು ಬಂದ ನಂತರ ಗುಣ ಪಡಿಸುವ ಬದಲು, ಆರೋಗ್ಯವಾಗಿರುವಾಗಲೇ ಉತ್ತಮ ನಿಯಂತ್ರಿತ ಆಹಾರ ಸೇವನೆ, ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದರಿಂದ ದೂರ ಇಡಬಹುದು. ಈ ಬಗ್ಗೆ ನಮಗಿರುವ ಜಾಗೃತಿಯೇ ನಮಗೆ ರಕ್ಷಣೆ ಎಂದು ಅಮೆರಿಕಾ ಚಿಕಾಗೋದ ನರರೋಗ ತಜ್ಞೆ ಡಾ.ರೋಹಿಣಿ ಉಡುಪ ಹೇಳಿದ್ದಾರೆ.

ಉಡುಪಿ ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಕಾಲೇಜು ರೋಟರಾಕ್ಟ್ ಕ್ಲಬ್ ಮತ್ತು ಭಾರತೀಯ ವೈದ್ಯಕೀಯ ಸಂಘಗಳ ಜಂಟಿ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ರವಿವಾರ ಆಯೋಜಿಸಲಾದ ಉಚಿತ ಮಧುಮೇಹ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರಸಾದ್ ನೇತ್ರಾಲಯಯದ ರೆಟಿನಾ ವಿಭಾಗದ ಮುಖ್ಯಸ್ಥ ಡಾ.ಜಾಕೋಬ್ ಚಾಕೊ ಮಾತನಾಡಿ, ಮಧುಮೇಹದಿಂದ ಅತೀ ಶೀಘ್ರ ಮತ್ತು ಅತೀ ಹೆಚ್ಚಿನ ತೊಂದರೆಗೊಳಗಾಗುವ ಅಂಗ ಕಣ್ಣುಗಳು. ಮಧುಮೇಹದ ತೊಂದರೆ ಇರು ವವರು ತಕ್ಷಣ ಕಣ್ಣಿನ ದಷ್ಟಿ ಪರೀಕ್ಷೆ, ನರ ಪರೀಕ್ಷೆಗಳನ್ನು ಮಾಡಿಸಬೇಕು. ಮಧು ಮೇಹ ನಿಯಂತ್ರಣದಲ್ಲಿ ಇಲ್ಲದಿದ್ದರೆ ಖಾಯಂ ದೃಷ್ಟಿಹೀನತೆ ಉಂಟಾಗುವ ಸಾಧ್ಯತೆ ಇದೆ ಎಂದರು.

ಡಾ.ಶ್ರೀರಾಮ್ ಉಡುಪ, ರೋಟರಿ ಉಪರಾಜ್ಯಪಾಲ ಪ್ರೊ.ಬಾಲಕಷ್ಣ ಮದ್ದೋಡಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ಅಧ್ಯಕ್ಷ ಡಾ.ಪಿ.ಎಸ್.ಗುರುಮೂರ್ತಿ ಭಟ್, ನೇತ್ರ ಜ್ಯೋತಿ ಕಾಲೇಜಿನ ನಿರ್ದೇಶಕಿ ರಶ್ಮಿ ಕಷ್ಣಪ್ರಸಾದ್, ನೇತ್ರಜ್ಯೋತಿ ರೋಟರಾಕ್ಟ್‌ನ ಕ್ಲಬ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಕಾಲೇಜಿನ ಸಂಯೋಜಕ ಅಬ್ದುಲ್ ಖಾದರ್, ಕ್ಲಬ್‌ನ ಅಧ್ಯಕ್ಷ ಶಶಿಕಾಂತ್ ಉಪಸ್ಥಿತರಿದ್ದರು.

ಮಧುಮೇಹದ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆ, ಪೋಸ್ಟರ್ ತಯಾರಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಮ್ಯ ಮತ್ತು ಸಹನಾ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕಿ ಸೌಮ್ಯ ವಂದಿಸಿದರು. ಪ್ರಸಾದ್ ನೇತ್ರಾಲಯದ ಆಡಳಿತಾಧಿ ಕಾರಿ ಎಂ.ವಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಂದ ಮಧುಮೇಹ ಜಾಗೃತಿಯ ಬಗ್ಗೆ ಕಿರು ನಾಟಕ ಪ್ರದರ್ಶನ ನಡೆಯಿತು. ನಂತರ ನಡೆದ ಶಿಬಿರದಲ್ಲಿ ನೂರಕ್ಕೂ ಮಿಕ್ಕಿ ಜನರಿಗೆ ಉಚಿತ ಮಧುಮೇಹ ಕಣ್ಣಿನ ತಪಾಸಣೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News