ಬದ್ರಿಯಾ ಜುಮಾ ಮಸೀದಿನಿಂದ ಮೀಲಾದ್ ಪ್ರತಿಭೋತ್ಸವ

Update: 2018-11-18 17:14 GMT

ಮಂಗಳೂರು, ನ.18: ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಬಜಾಲ್ ನಂತೂರು ಆಶ್ರಯದಲ್ಲಿ ಮೀಲಾದ್ ಪ್ರತಿಭೋತ್ಸವ ಕಾರ್ಯಕ್ರಮವು ರವಿವಾರ ಮಗ್ರಿಬ್ ನಮಾಜಿನ ನಂತರ ನಡೆಯಿತು.

ಬದ್ರಿಯಾ ಜುಮಾ ಮಸೀದಿ ಬಜಾಲ್ ನಂತೂರು ಮುದರ್ರಿಸ್ ಇಲ್ಯಾಸ್ ಅಮ್ಜದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲೌಕಿಕ ಕಾರ್ಯಕ್ರಮ ಗಳಿಗೆ ಆದ್ಯತೆ ನೀಡುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಹುಮ್ಮಸ್ಸು ಅಗತ್ಯವಿದೆ. ಹಾಗಾದರೆ ಮಾತ್ರ ನಾವು ಪ್ರವಾದಿ ಯವರ ಪ್ರೀತಿಗೆ ಪಾತ್ರರಾಗಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ರವೂಫ್ ವಹಿಸಿದ್ದರು.

ವೇದಿಕೆಯಲ್ಲಿ ಹಾಜಿ ಬಿ.ಎನ್. ಅಬ್ಬಾಸ್ ಹಾಜಿ, ಬಿ.ಫಕ್ರುದ್ದೀನ್, ಅಬ್ದುಲ್ ಕರೀಂ ಪಾಂಡೆಲ್, ಎಚ್.ಎಸ್. ಹನೀಫ್ ಹಾಜಿ, ಅಬ್ದುಲ್ ಸಲಾಂ, ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ಹಮೀದ್, ಖಿದ್ಮತುಲ್ ಇಸ್ಲಾಂ ಖುತುಬಿಯ್ಯತ್ ಕಮಿಟಿ ಅಧ್ಯಕ್ಷ ಅಶ್ರಫ್ ಕೆ.ಇ., ಶಾಫಿ ಮಿಸ್ಬಾಹಿ, ಶಂಸುದ್ದೀನ್ ಅಶ್ರಫ್ ತೋಟ, ಮುಹಮ್ಮದ್ ಮುಲ್ಲಗುಡ್ಡೆ, ಹಸನಬ್ಬ, ಹನೀಫ್ ಕೆಳಗಿನ ಮನೆ, ಹನೀಫ್ ಬೈಕಂಪಾಡಿ ಹಾಗೂ ಮದ್ರಸಾ ಅಧ್ಯಾಪಕರಾದ ಅಬ್ದುರ್ರಹ್ಮಾನ್ ಮದನಿ, ಅಬ್ದುಲ್ ಹಕೀಂ ಮದನಿ, ಅಬೂಬಕರ್ ಸಖಾಫಿ, ಶರೀಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಹಯಾತುಲ್ ಇಸ್ಲಾಂ ಮದ್ರಸ ನಂತೂರು ಸದರ್ ಮುಅಲ್ಲಿಂ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News