ಉಡುಪಿ: ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತು

Update: 2018-11-19 15:37 GMT

ಉಡುಪಿ, ನ.19: ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತು ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು. ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತೆ ಕಪಿಲಾ ಅವರು ದೀಪ ಬೆಳಗಿಸುವ ಮೂಲಕ ಸಂಸತ್ತನ್ನು ಉದ್ಘಾಟಿಸಿದರು.

ಉದ್ಘಾಟಕಿ ಕಪಿಲಾ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಭಯಪಡದೆ 1098ನ್ನು ಸಂಪರ್ಕಿಸು ವಂತೆ ಸಲಹೆ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಸಂಯೋಜಕ ಪ್ರಭಾಕರ್ ನಾಯಕ್ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಗ್ರಾಮಸಭೆಯ ಬಗ್ಗೆ ಮಾಹಿತಿ ನೀಡಿದರು.

ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಎಸ್.ವಿ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸಂಸತ್ತಿನ ಬಗ್ಗೆ ವಿವರಿಸಿದ ರಲ್ಲದೇ, ಉಡುಪಿ ಜಿಲ್ಲಾ ಮಟ್ಟದಲ್ಲಿ ಆಯ್ದ ಮಕ್ಕಳು ರಾಜ್ಯದ ಮುಖ್ಯಮಂತ್ರಿ ಗಳೊಂದಿಗೆ ನೇರ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಎಸ್.ವಿ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸಂಸತ್ತಿನ ಬಗ್ಗೆ ವಿವರಿಸಿದ ರಲ್ಲದೇ, ಉಡುಪಿ ಜಿಲ್ಲಾ ಮಟ್ಟದಲ್ಲಿ ಆಯ್ದ ಮಕ್ಕಳು ರಾಜ್ಯದ ಮುಖ್ಯಮಂತ್ರಿ ಗಳೊಂದಿಗೆ ನೇರ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಮಕ್ಕಳನ್ನು ಮಕ್ಕಳೆ ವೋಟ್ ಮಾಡುವ ಮೂಲಕ ಇಬ್ಬರು ಮಕ್ಕಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿದರು. ಇದರಲ್ಲಿ ಆಯ್ಕೆ ಆದವರು ಕುಂದಾಪುರ ನಮ್ಮ ಭೂಮಿಯ ವಿಸ್ಮಿತ ಹಾಗೂ ತಲ್ಲೂರಿನ ಸರಕಾರಿ ಪ್ರೌಢ ಶಾಲೆಯ ಹೇಮಂತ್. ಇವರು ಮೂರು ದಿನಗಳ ಕಾಲ ರಾಜ್ಯ ಮಟ್ಟದಲ್ಲಿ ನಡೆಯುವ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಭಾಗವಹಿಸಲಿದ್ದಾರೆ ಹಾಗೂ ಮುಖ್ಯಮಂತ್ರಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಸುಲೋಚನ ಕೊಡವೂರು, ಮಂಗಳೂರು ಪಡಿಯ ದ.ಕ.ಜಿಲ್ಲಾ ಸಂಯೋಜಕಿ ಜಯಂತಿ, ಮಕ್ಕಳ ಕಲ್ಯಾಣ ಸಮಿತಿಯ ಸಂಯೋಜಕರಾದ ಪ್ರಭಾಕರ ನಾಯಕ್ ಹಾಗೂ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅದ್ಯಕ್ಷ ಮೋಹನ್‌ಚಂದ್ರ ಕಾಳಾವರ ನಿರೂಪಿಸಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News