ನ. 22ರಿಂದ ‘ಪಾಪು ಗಾಂಧಿ-ಗಾಂಧಿ ಬಾಪು’ ನಾಟಕ ಪ್ರದರ್ಶನ

Update: 2018-11-19 17:09 GMT

ಉಡುಪಿ, ನ.19: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿ ಯಿಂದ ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ‘ಪಾಪು ಗಾಂಧಿ-ಗಾಂಧಿ ಬಾಪು’ ನಾಟಕ ಪ್ರದರ್ಶನವನ್ನು ಉಡುಪಿ ಜಿಲ್ಲೆ ಯಲ್ಲಿ ನ.22ರಿಂದ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಮಾತನಾಡಿ, ಜಿಲ್ಲೆಯ ಪ್ರಮುಖ ಶಾಲಾ ಕಾಲೇಜುಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ಎಲ್ಲಾ ಇಲಾಖೆಗಳು ಇದರ ಯಶಸ್ವಿಗೆ ಸಹಕರಿಸಬೇಕು. ಸ್ಥಳೀಯವಾಗಿ ಸಾಂಸ್ಕೃತಿಕ ಹಾಗೂ ಯುವ ಸಂಘಟನೆಗಳ ಸಹಕಾರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮಾತನಾಡಿ, ಈ ನಾಟಕವನ್ನು ರಂಗಾಯಣ, ನೀನಾಸಂ ಸಹಿತ ರಾಜ್ಯದ ಖ್ಯಾತ ರಂಗ ಶಾಲೆಗಳಲ್ಲಿ ತರಬೇತಿ ಪಡೆದ ವೃತ್ತಿ ಕಲಾವಿದರು ನಡೆಸಿಕೊಡಲಿದ್ದಾರೆ. ನ.21ರಿಂದ ಡಿಸೆಂಬರ್ 8ರವರೆಗ ಉಡುಪಿ ಜಿಲ್ಲೆಯಲ್ಲಿ ಪ್ರತೀ ದಿನ ಎರಡು ನಾಟಕ ಪ್ರದರ್ಶನಗಳು ನಡೆಯಲಿವೆ. ಪ್ರಮುಖವಾಗಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಸುಬ್ರಹ್ಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ನಾಟಕ ಪ್ರದರ್ಶನದ ಸಂಘಟಕ ಪ್ರಥ್ವಿನ್ ಉಪಸ್ಥಿತರಿದ್ದರು.

ನಾಟಕ ಪ್ರದರ್ಶನದ ವಿವರ

ನ.22- ಬೀಜೂರು, ಬೈಂದೂರು, 23- ಕೊಲ್ಲೂರು, 24- ಬೈಂದೂರು, ಕಂಬದಕೋಣೆ, 25- ಬೈಂದೂರು, 26- ಕುಂದಾಪುರ, 27- ವಂಡ್ಸೆ, ಕುಂದಾ ಪುರ, 28- ಕುಂದಾಪುರ, ಕೋಟೇಶ್ವರ, 29- ಬಸ್ರೂರು, 30- ಕಂಬದಕೋಣೆ, ಹಕ್ಲಾಡಿ, ಡಿ.1- ಕೋಟ, 2- ಉಡುಪಿ, 3- ಕಾರ್ಕಳ, 4- ಹೆಬ್ರಿ, 5- ನಿಟ್ಟೂರು, ಹಿರಿಯಡಕ, 6- ಮಣಿಪಾಲ, ಉಡುಪಿ, 7- ಬ್ರಹ್ಮಾವರ, ಡಿ.8-ಉದ್ಯಾವರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News