ಉಡುಪಿ: ಬಿಪಿಎಲ್ ಕುಟುಂಬಗಳ ಮಾಹಿತಿ ಸಮೀಕ್ಷೆ

Update: 2018-11-19 17:13 GMT

ಉಡುಪಿ, ನ.19: ಖಾದಿ ಮಂಡಳಿಯಿಂದ ಸಾಲ ಪಡೆದಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿ ಕುಟುಂಬಗಳ ಮಾಹಿತಿಯ ಸಮೀಕ್ಷೆ ಯನ್ನು ನಡೆಸಲಾಗುತ್ತಿದೆ.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮೂಲಕ ಧನಸಹಾಯ ಸ್ವರೂಪ ಯೋಜನೆ(ಪಿಬಿಎಸ್) ಮತ್ತು ಸಮೂಹ ಬ್ಯಾಂಕ್ ಯೋಜನೆ (ಸಿಬಿಸಿ)ಯಡಿ ಸಾಲ ಪಡೆದಿರುವ ಎಲ್ಲಾ ಬಿಪಿಎಲ್ ಕಾರ್ಡ್ ಕುಟುಂಬಗಳು ಮರುಪಾವತಿಗಾಗಿ ಬಾಕಿ ಇರುವ ಸಾಲವನ್ನು ಮನ್ನಾ ಮಾಡ ಲಾಗುವುದು ಎಂಬ ಘೋಷಣೆಯಡಿ ಮಂಡಳಿಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು.

ಆ ಮೇರೆಗೆ ಈ ಯೋಜನೆಯನ್ನು ಜಾರಿಗೆ ತರಲು ಮಂಡಳಿಯಿಂದ ಎರಡು ಯೋಜನೆಯಡಿ ಮತ್ತು ತಾಲೂಕು ಮಟ್ಟದ ವಿವಿದ್ದೋದ್ದೇಶ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯವನ್ನು ಪಡೆದಿರುವ, ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಕುಟುಂಬಗಳ ವಿವರವನ್ನು ಸಮೀಕ್ಷೆ ಮಾಡುವ ಅವಧಿ ಯನ್ನು ನ.30ರವರೆಗೆ ವಿಸ್ತರಿಸಲಾಗಿದೆ.

ಖಾದಿ ಮಂಡಳಿ ಮೂಲಕ ಧನಸಹಾಯ ಸ್ವರೂಪ ಮತ್ತು ಸಮೂಹ ಬ್ಯಾಂಕ್ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿ ಗಳು ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಕಚೇರಿ(0820-2574855) ಯನ್ನು ಸಂಪರ್ಕಿಸಿ, ದಾಖಲಾತಿಗಳನ್ನು ಒದಗಿಸುವಂತೆ ಉಡುಪಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News