ಪ್ರತ್ಯೇಕ ಜೂಜಾಟ ಪ್ರಕರಣ: ಮೂವರ ಬಂಧನ, 21,510 ರೂ. ನಗದು ವಶ

Update: 2018-11-19 17:22 GMT

ಮಂಗಳೂರು, ನ.19: ನಗರದಲ್ಲಿ ಸೋಮವಾರ ಮೂರು ಪ್ರತ್ಯೇಕ ಮಟ್ಕಾ ಜೂಜು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿ ಒಟ್ಟು 21,510 ರೂ. ನಗದು, ಮೂರು ಮೊಬೈಲ್ ಮತ್ತು ಮಟ್ಕಾ ಚೀಟಿಗಳನ್ನು ವಶ ಪಡಿಸಿಕೊಂಡಿದ್ದಾರೆ.

ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಹಾಗೂ ಕಾವೂರು ಪೊಲೀಸರ್ ಠಾಣೆ ಸರಹದ್ದಿನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಬಜಿಲ ಕೇರಿ ಮುಖ್ಯ ಪ್ರಾಣ ದೇಗುಲದ ಸಮೀಪ ಮಟ್ಕಾ ಆಡುತ್ತಿದ್ದ ಮಣ್ಣಗುಡ್ಡೆಯ ಪ್ರಕಾಶ್ (49) ನನ್ನು ಬಂಧಿಸಿ 10,340 ರೂ. ನಗದು, 1 ಮೊಬೈಲ್ ಮತ್ತು ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದ ಸುಲಭ್ ಶೌಚಾಲಯ ಬಳಿ ಮಟ್ಕಾ ಆಡುತ್ತಿದ್ದ ಆಕಾಶಭವನದ ಜಗದೀಶ್ (47) ನನ್ನು ಬಂಧಿಸಿ 8170 ರೂ. ನಗದು, ಮೊಬೈಲ್ ಮತ್ತು ಮಟ್ಕಾ ಚೀಟಿಗಳನ್ನು ವಶ ಪಡಿಸಲಾಗಿದೆ. ಈ ಎರಡು ಪ್ರಕರಣಗಳಲ್ಲಿ ಬಂದರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್‌ ಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಕಾವೂರು ಜಂಕ್ಷನ್‌ನ ರಿಕ್ಷಾ ನಿಲ್ದಾಣದ ಬಳಿ ಸಂಜೆ ಹೊತ್ತು ಮಟ್ಕಾ ಆಟದಲ್ಲಿ ನಿರತನಾಗಿದ್ದ ಸ್ಥಳೀಯ ನಿವಾಸಿ ಸುನಿಲ್ (32) ನನ್ನು ಕಾವೂರು ಪೊಲೀಸರು ಬಂಧಿಸಿ 3,000 ರೂ. ನಗದು, ಮೊಬೈಲ್ ಮತ್ತು ಮಟ್ಕಾ ಚೀಟಿಗಳನ್ನು ವಶ ಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News